ರಾಜ್ಯದಲ್ಲಿ ಹೈಕೋರ್ಟ್ ಸೇರಿ ಎಲ್ಲ ನ್ಯಾಯಾಲಯಗಳಿಗೆ ಮೇ 16ರವರೆಗೆ ರಜೆ ವಿಸ್ತರಣೆ

ಬೆಂಗಳೂರು, ಎ.30: ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲ ನ್ಯಾಯಾಲಯಗಳ ರಜೆಯನ್ನು 2020ರ ಮೇ 16ರವರೆಗೆ ವಿಸ್ತರಿಸಲಾಗಿದೆ.
ವಿಚಾರಣಾ ನ್ಯಾಯಾಲಯ, ಜಿಲ್ಲಾ, ಕಾರ್ಮಿಕ, ಕೌಟುಂಬಿಕ ಮತ್ತು ಕೈಗಾರಿಕಾ ನ್ಯಾಯಮಂಡಳಿಗಳಿಗೆ ಈ ರಜೆ ವಿಸ್ತರಿಸಲಾಗಿದೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬದಾಮಿಕರ ಅವರು ಗುರುವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುರ್ತು ಪ್ರಕರಣಗಳನ್ನು ವಿಡಿಯೊ ಕಾನ್ಫರೆನ್ಸ್ ಮುಖಾಂತರ ವಿಚಾರಣೆ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಲಾಗಿದೆ.
Next Story





