ಮುಸ್ಲಿಂ ಜಮಾಅತ್ ಕೃಷ್ಣಾಪುರ ವತಿಯಿಂದ ರಮಝಾನ ಕಿಟ್ ವಿತರಣೆ

ಮಂಗಳೂರು, ಮೇ 1: ಬದ್ರಿಯಾ ಜುಮಾ ಮಸೀದಿ ಮುಸ್ಲಿಂ ಜಮಾಅತ್ ಕೃಷ್ಣಾಪುರ ಇದರ ವತಿಯಿಂದ ರಮಝಾನ್ ಕಿಟ್ ವಿತರಣೆ ಕಾರ್ಯಕ್ರಮವು ಶುಕ್ರವಾರ ನಡೆಯಿತು.
ಕೃಷ್ಣಾಪುರ ಜಮಾಅತ್ ಆಡಳಿತಕ್ಕೆ ಒಳಪಟ್ಟ ಆರು ಜುಮಾ ಮಸೀದಿ ವ್ಯಾಪ್ತಿಯ 2000 ಮನೆಗಳಿಗೆ ಅಂದಾಜು 20 ಲಕ್ಷ ರೂ. ಮೌಲ್ಯದ ರಮಝಾನ್ ಕಿಟ್‌ಗಳನ್ನು ವಿತರಿಸಲಾಯಿತು.
ಖಾಝಿ ಅಲ್ಹಾಜ್ ಇ.ಕೆ ಇಬ್ರಾಹೀಂ ಮುಸ್ಲಿಯಾರ್ ದುಆಗೈದರು. ಈ ಸಂದರ್ಭದಲ್ಲಿ ಕೇಂದ್ರ ಜುಮಾ ಮಸೀದಿಯ ಖತೀಬ್ ಉಮರುಲ್ ಫಾರೂಕ್ ಸಖಾಫಿ, ಜಮಾತಿನ ಅಧ್ಯಕ್ಷ ಅಲ್ಹಾಜ್ ಬಿ.ಎಂ. ಮುಮ್ತಾಝ್ ಅಲಿ ಕೃಷ್ಣಾಪುರ, ಮಸೀದಿಯ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು ಹಾಗು ಅಧೀನದಲ್ಲಿರುವ ಎಲ್ಲಾ ಮಸೀದಿಯ ಪದಾಧಿಕಾರಿಗಳು ಜಮಾತಿನ ಸದಸ್ಯರುಗಳು, ಅಲ್ ಬದ್ರಿಯಾ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.












