ಕೊಟ್ಟಾರ ಚೌಕಿಯಲ್ಲಿ ಕಾರ್ಮಿಕ ದಿನಾಚರಣೆ

ಮಂಗಳೂರು, ಮೇ 1: ಅಸಂಘಟಿತ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ನೀಡಲು ಕೇಂದ್ರ ಮತ್ತು ರಾಜ್ಯ ಸರಕಾರ ಮುಂದೆ ಬರಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆಗ್ರಹಿಸಿದ್ದಾರೆ.
ನಗರದ ಕೊಟ್ಟಾರ ಚೌಕಿಯಲ್ಲಿ ಶುಕ್ರವಾರ ನಡೆದ ಕಾರ್ಮಿಕ ದಿನಾಚರಣೆಯಲ್ಲಿ ಚಾಲಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ದೇಶದ ಅಸಂಘಟಿತ ಕಾರ್ಮಿಕರ ರಕ್ಷಣೆಗೆ ಸರಕಾರ ಮುಂದಾಗಬೇಕು. ಶೇ.80ರಷ್ಟು ಅಸಂಘಟಿತ ಕಾರ್ಮಿಕರು ರಕ್ಷಣೆ ಇಲ್ಲದೆ ಇವತ್ತು ಅವರು ಬೀದಿಗೆ ಪಾಲಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಎಲ್ಲಾ ಕಾನೂನುಗಳು ನಲವತ್ತರ ವಯಸ್ಸಿನ ಕಾರ್ಮಿಕರಿಗೆ ಮಾತ್ರ ಅನುಕೂಲ ವಾಗಿದೆ. 40 ವರ್ಷದ ಮೇಲ್ಪಟಗಟ ಕಾರ್ಮಿಕರಿಗೆ ರಕ್ಷಣೆ ನೀಡುವಂಥ ಕಾನೂನುಗಳನ್ನು ತರುವಂತಹ ಅಗತ್ಯ ಇದೆ ಎಂದು ಐವನ್ ನುಡಿದರು.
ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಸುಕುಮಾರ್ ಕುಲಾಲ್ , ಜನಾರ್ದನ್, ಚಂದ್ರಶೇಖರ್, ಅಡಪ್ಪ, ಕೃಷ್ಣ ಸಾಲಿಯಾನ್ ಸನ್ಮಾನಿಸಲ್ಪ ಟ್ಟರು. ಈ ಸಂದರ್ಭ 50 ಕಾರ್ಮಿಕರ ಕುಟುಂಬಗಳಿಗೆ ಅಕ್ಕಿ ಮತ್ತು ದಿನಸಿ ವಸ್ತುಗಳನ್ನು ವಿತರಿಸಲಾಯಿತು.
Next Story





