ಅಡ್ಡೂರು : ರೈಡರ್ಸ್ ಫ್ರೆಂಡ್ಸ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

ಗುರುಪುರ, ಮೇ 1: ಗುರುಪುರ ಗ್ರಾಪಂ ವ್ಯಾಪ್ತಿಯ ಅಡ್ಡೂರು ಗ್ರಾಮದಲ್ಲಿ ಸಕ್ರಿಯರಾಗಿರುವ ಆಶಾ ಕಾರ್ಯಕರ್ತೆಯರ ಅವಿರತ ಸೇವೆಯನ್ನು ಪರಿಗಣಿಸಿ ಶುಕ್ರವಾರ ಅಡ್ಡೂರು ಕಾಂಜಿಲಕೋಡಿಯ ರೈಡರ್ಸ್ ಫ್ರೆಂಡ್ಸ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಅಗತ್ಯ ದಿನಸಿ ಸಾಮಗ್ರಿ ನೀಡಿ ಸನ್ಮಾನಿಸಲಾಯಿತು.
ರೈಡರ್ಸ್ ಫ್ರೆಂಡ್ಸ್ ಅಧ್ಯಕ್ಷ ಸುಭಾಶ್ಚಂದ್ರರ ಮನೆಯಲ್ಲಿ ಏರ್ಪಡಿಸಲಾದ ಸರಳ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಾದ ಜಯಲಕ್ಷ್ಮಿ, ಸಿಂತ್ಯಾ ಡಿಸೋಜ, ಸುಗಂಧಿ, ತುಳಸಿ, ಸುಜಾತಾ ಮತ್ತು ಕಿರಿಯ ಆರೋಗ್ಯ ಸಹಾಯಕಿ ನಿಶಾ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ತಾಪಂ ಸದಸ್ಯ ಸಚಿನ್ ಅಡಪ, ಗುರುಪುರ ಗ್ರಾಪಂ ಅಧ್ಯಕ್ಷೆ ರುಕಿಯಾ, ಬದ್ರುಲ್ ಹುದಾ ಜುಮಾ ಮಸೀದಿಯ ಅಧ್ಯಕ್ಷ ಎಂ ಎ ಅಹ್ಮದ್ ಬಾವ, ಗ್ರಾಪಂ ಸದಸ್ಯರಾದ ಯಶವಂತ ಶೆಟ್ಟಿ, ಹರಿಶ್ಚಂದ್ರ ಅಮೀನ್, ಎಕೆ ರಿಯಾಝ್, ಎಕೆ ಅಶ್ರಫ್ ಹಾಗೂ ಹಸನ್ ಬಾವ, ಝಕರಿಯಾ ಹಾಜಿ, ಎಂಎಚ್ ಸಾಹುಲ್ ಹಮೀದ್, ನಝಿರ್ ನೂಯಿ, ಇಮ್ರಾನ್ ಅಡ್ಡೂರು, ಎಂಎಸ್ ಶೇಖ್ ಮೋನು, ವಿಶ್ವೇಶ್ವರ ಭಟ್ ಹಾಗೂ ರೈಡರ್ಸ್ ಫ್ರೆಂಡ್ಸ್‌ನ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.





