ರಾಜ್ಯದಲ್ಲಿ ಕೊರೋನ ಪ್ರಕರಣದಲ್ಲಿ ಮತ್ತಷ್ಟು ಹೆಚ್ಚಳ: ಶುಕ್ರವಾರ 24 ಮಂದಿಗೆ ಸೋಂಕು ದೃಢ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ.1: ರಾಜ್ಯದಲ್ಲಿ ಇಂದು ಮತ್ತೆ 24 ಮಂದಿಯಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 589ಕ್ಕೇರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಸಂಜೆ ಬಿಡುಗಡೆಗೊಳಿಸಿರುವ ಆರೋಗ್ಯ ಬುಲೆಟ್ನಲ್ಲಿ ಗುರುವಾರ ಸಂಜೆ 5ರಿಂದ ಇಂದು ಸಂಜೆ 5 ಗಂಟೆಯೊಳಗೆ ಹೊಸ 24 ಪ್ರಕರಣಗಳು ವರದಿಯಾಗಿರುವುದಾಗಿ ತಿಳಿಸಿದೆ.
ಈ ಪೈಕಿ ಮಂಡ್ಯದಲ್ಲಿ 8, ದಾವಣಗೆರೆಯಲ್ಲಿ 6, ಬೆಳಗಾವಿಯಲ್ಲಿ 3, ಕಲಬುರಗಿ, ದಕ್ಷಿಣ ಕನ್ನಡದಲ್ಲಿ ತಲಾ ಎರಡು ಹಾಗೂ ಚಿಕ್ಕಬಳ್ಳಾಪುರ ಹಾಗೂ ವಿಜಯಪುರ, ಹುಬ್ಬಳ್ಳಿ-ಧಾರವಾಡದಲ್ಲಿ ತಲಾ ಒಂದು ಪ್ರಕರಣಗಳು ದೃಢಪಟ್ಟಿದೆ.
ಒಟ್ಟಾರೆ ಇದುವರೆಗೆ ರಾಜ್ಯದಲ್ಲಿ ಪಾಸಿಟಿವ್ ಬಂದ 589 ಪ್ರಕರಣಗಳಲ್ಲಿ 251 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 22 ಮಂದಿ ಮೃತಪಟ್ಟಿದ್ದಾರೆ.
Next Story





