ದಿಲ್ಲಿ ಆಪ್ ಶಾಸಕ ವಿಶೇಷ್ ರವಿಗೆ ಕೊರೋನ ವೈರಸ್ ಸೋಂಕು

ಹೊಸದಿಲ್ಲಿ ಮೇ1: ದಿಲ್ಲಿಯ ಆಪ್ ಶಾಸಕ ವಿಶೇಷ್ ರವಿ ಹಾಗೂ ಅವರ ಸಹೋದರನಿಗೆ ಕೊರೋನ ವೈರಸ್ ತಗಲಿರುವುದು ದೃಢಪಟ್ಟಿದೆ. ವಿಧಾನ ಸಭೆಯಲ್ಲಿ ಕರೋಲ್ ಬಾಗ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಆಪ್ ನಾಯಕ ರವಿ ಬುಧವಾರ ಕೊರೋನ ಪರೀಕ್ಷೆಗೆ ಒಳಗಾಗಿದ್ದರು. ಇಂದು ಬಂದಿರುವ ಫಲಿತಾಂಶದಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
ಶಾಸಕನಿಗೆ ಈ ತನಕ ಕಾಯಿಲೆಯ ಯಾವುದೇ ಲಕ್ಷಣ ಕಂಡುಬಂದಿರಲಿಲ್ಲ. ಅವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಪ್ರಸ್ತುತ ಮೂರನೇ ಅವಧಿಗೆ ಶಾಸಕನಾಗಿ ಸೇವೆ ಸಲ್ಲಿಸುತ್ತಿರುವ ಆಪ್ ನಾಯಕ ರವಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಲಸಿಗರಿಗಾಗಿ ನಡೆಸುತ್ತಿರುವ ಪರಿಹಾರ ಕಾರ್ಯಗಳ ಬಗ್ಗೆ ನಿರಂತರ ಪೋಸ್ಟ್ ಮಾಡುತ್ತಿದ್ದರು.
ರವಿ ರಾಷ್ಟ್ರ ರಾಜಧಾನಿಯಲ್ಲಿ ಕೊರೋನ್ ವೈರಸ್ ಸೋಂಕಿಗೆ ತುತ್ತಾದ ಮೊದಲ ಜನಪ್ರತಿನಿಧಿಯಾಗಿದ್ದಾರೆ. ದಿಲ್ಲಿಯಲ್ಲಿ 3510 ಕೊರೋನ ವೈರಸ್ ಪ್ರಕರಣ ದಾಖಲಾಗಿದ್ದು ಈ ಪೈಕಿ 59 ಮಂದಿ ಸಾವನ್ನಪ್ಪಿದ್ದಾರೆ.
Next Story





