ದೇಶದಲ್ಲಿ ಕೋವಿಡ್-19ಗೆ 24 ಗಂಟೆಯಲ್ಲಿ 77 ಮಂದಿ ಸಾವು

ಹೊಸದಿಲ್ಲಿ, ಮೇ1: ಭಾರತದಲ್ಲಿ ಶುಕ್ರವಾರ ಒಂದೇ ದಿನ ಕೊರೋನ ವೈರಸ್‌ಗೆ ಅತ್ಯಂತ ಹೆಚ್ಚು ಜನರು ಬಲಿಯಾಗಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 77 ಮಂದಿ ಕೊರೋನ ವೈರಸ್‌ಗೆ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಡಾಟಾದಿಂದ ಬಹಿರಂಗವಾಗಿದೆ.
ಭಾರತದಲ್ಲಿ ಕೊರೋನಕ್ಕೆ ಬಲಿಯಾದವರ ಸಂಖ್ಯೆ ಇದೀಗ 1,152ಕ್ಕೆ ತಲುಪಿದೆ. ಸೋಂಕಿತರ ಸಂಖ್ಯೆ 35,365ಕ್ಕೆ ತಲುಪಿದೆ.ಈ ಪೈಕಿ 9,065 ಮಂದಿ ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ.
"ದೇಶದಲ್ಲಿ 1,993 ಕೊರೋನ ವೈರಸ್‌ನ ಹೊಸ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಕೊರೋನ ವೈರಸ್ ಸಂಖ್ಯೆ 25,148ಕ್ಕೆ ತಲುಪಿದೆ. ಈ ತನಕ ಶೇ.25.63 ರೋಗಿಗಳು ಚೇತರಿಸಿಕೊಂಡಿದ್ದಾರೆ'' ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ತಿಳಿಸಿದ್ದಾರೆ.
Next Story





