ದಿಲ್ಲಿಯ ಸಿಆರ್‌ಪಿಎಫ್ ಬೆಟಾಲಿಯನ್‌ನ 122 ಯೋಧರಿಗೆ ಕೋವಿಡ್-19 ಸೋಂಕು

ಹೊಸದಿಲ್ಲಿ, ಮೇ 2: ದಿಲ್ಲಿಯ ಸಿಆರ್‌ಪಿಎಫ್ ಬೆಟಾಲಿಯನ್‌ನ 122 ಯೋಧರಿಗೆ ಕಳೆದ ಎರಡು ವಾರಗಳಲ್ಲಿ ನಡೆಸಲಾಗಿರುವ ಕೊರೋನ ವೈರಸ್ ಪರೀಕ್ಷೆಯಲ್ಲಿ ಸೋಂಕು ತಗಲಿರುವುದು ದೃಢಪಟ್ಟಿದೆ. ಇನ್ನೂ 100 ಯೋಧರ ಕೋವಿಡ್-19 ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಈ ವಿಚಾರವನ್ನು ಗಮನಕ್ಕೆ ತೆಗೆದುಕೊಂಡಿದ್ದು ಕೊರೋನ ವೈರಸ್ ಹರಡುವುದಕ್ಕೆ ಕಡಿವಾಣ ಹಾಕಲು ಸಾಧ್ಯವಾಗದಿರುವುದಕ್ಕೆ ಕಾರಣವಾದ ಸಂದರ್ಭವನ್ನು ವಿವರಿಸುವಂತೆ ಸಿಆರ್‌ಪಿಎಫ್ ಮುಖ್ಯಸ್ಥರಿಗೆ ಕೇಳಿದೆ.
ಕಳೆದ ಕೆಲವು ದಿನಗಳಲ್ಲಿ ಬೆಟಾಲಿಯನ್‌ನಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಸ್ಸಾಂನ 55 ವರ್ಷದ ಯೋಧ ಈ ವಾರಾರಂಭದಲ್ಲಿ ದಿಲ್ಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಶುಕ್ರವಾರ ಬೆಟಾಲಿಯನ್‌ನ 12 ಯೋಧರಿಗೆ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ. ಕೆಲವೇ ದಿನಗಳ ಹಿಂದೆ ಘಟಕದ 45 ಯೋಧರಿಗೆ ವೈರಸ್ ತಗಲಿರುವುದು ದೃಢಪಟ್ಟಿತ್ತು . ವೈರಸ್ ಸೋಂಕಿತ ಯೋಧರನ್ನು ರಾಜಧಾನಿಯ ಮಂಡವಾಲಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ







