ಕೊರೋನದಿಂದ ಬೆಂಗಳೂರಿನಲ್ಲಿ ಓರ್ವ ಮೃತ್ಯು

ಬೆಂಗಳೂರು, ಮೇ 2: ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊರೋನ ವೈರಸ್ ಸೋಂಕಿಗೆ ವೃದ್ಧರೊಬ್ಬರು ಬಲಿಯಾಗಿದ್ದಾರೆ.
ಗಂಟಲು ದ್ರವ ಪರೀಕ್ಷೆಯಲ್ಲಿ ಕೊರೋನ ಪಾಸಿಟಿವ್ ಬಂದಿದ್ದ ದೀಪಾಂಜಲಿ ನಗರದ 63 ವರ್ಷದ ವೃದ್ಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಕೋವಿಡ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ದೀರ್ಘಕಾಲೀನ ಮಧುಮೇಹ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ 557ನೇ ಕೊರೋನ ಸೋಂಕಿತ ರೋಗಿಯಾಗಿದ್ದ ಇವರಿಗೆ 465ನೇ ರೋಗಿಯಿಂದ ಸೋಂಕು ತಗಲಿತ್ತು. 465ನೇ ರೋಗಿ ಈಗಾಗಲೇ ಈ ಸೋಂಕಿನಿಂದ ಮೃತಪಟ್ಟಿದ್ದಾರೆ.
ತೀವ್ರ ತರಹದ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು ಎಪ್ರಿಲ್ 30ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಇಲಾಖೆಯ ಪ್ರಕಟನೆ ತಿಳಿಸಿದೆ.
ಬೆಂಗಳೂರಿನಲ್ಲಿ ಮೃತಪಟ್ಟ 63 ವರ್ಷದ ಈ ವ್ಯಕ್ತಿ ಸೋಂಕಿಗೆ ಬಲಿಯಾದ 24ನೇ ರೋಗಿಯಾಗಿದ್ದಾರೆ. 25ನೇ ರೋಗಿ 82 ವರ್ಷದ ವೃದ್ಧರೊಬ್ಬರು ಇಂದು ಬೀದರ್‌ನಲ್ಲಿ ಮೃತಪಟ್ಟಿದ್ದಾರೆ.
Next Story





