ಚೀನಾದಲ್ಲಿ ಹೊಸ ಕೊರೋನ ವೈರಸ್ ಪ್ರಕರಣ ಸಂಖ್ಯೆ 1ಕ್ಕೆ ಇಳಿಕೆ

ಬೀಜಿಂಗ್, ಮೇ 2:ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಾರಣಾಂತಿಕ ಕೊರೋನ ವೈರಸ್ ಮೊದಲ ಬಾರಿ ಕಾಣಿಸಿಕೊಂಡಿರುವ ಚೀನಾದಲ್ಲೀಗ ಕೋವಿಡ್-19 ಹೊಸ ಪ್ರಕರಣದ ಸಂಖ್ಯೆ ಒಂದಕ್ಕೆ ಇಳಿದಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ(ಎನ್‌ಎಚ್‌ಸಿ)ಶನಿವಾರ ತಿಳಿಸಿದೆ.
ಕೊರೋನಕ್ಕೆ ಬಲಿಯಾದವರ ಸಂಖ್ಯೆ 4,633ರಲ್ಲಿ ಸ್ಥಿರವಾಗಿದೆ. ಶುಕ್ರವಾರ ಮುಖ್ಯ ಭೂಭಾಗದಲ್ಲಿ ಒಟ್ಟು ದೃಢಪಟ್ಟಿರುವ ಪ್ರಕರಣಗಳು 82,875. ಈ ಪೈಕಿ 77,685 ಮಂದಿ ಚೇತರಿಸಿಕೊಂಡಿದ್ದಾರೆ. ಶುಕ್ರವಾರ ಕೇವಲ ಒಂದು ಆಮದು ಕೊರೋನ ವೈರಸ್ ಪ್ರಕರಣ ವರದಿಯಾಗಿದ್ದು, ಸ್ಥಳೀಯವಾಗಿ ಹೊಸ ಸೋಂಕು ಕಂಡುಬಂದಿಲ್ಲ ಎಂದು ಎನ್‌ಎಚ್‌ಸಿ ತಿಳಿಸಿದೆ.
ವೈರಸ್‌ನ ಪ್ರಮುಖ ಕೇಂದ್ರವಾಗಿರುವ ಹುಬೇ ಪ್ರಾಂತ್ಯದಲ್ಲಿ ಎಪ್ರಿಲ್ 4ರಿಂದ ಸತತ 28 ದಿನಗಳಲ್ಲಿ ಯಾವುದೇ ಹೊಸ ಕೊರೋನ ವೈರಸ್ ಪ್ರಕರಣ ಪತ್ತೆಯಾಗಿಲ್ಲ ಎಂದು ಸ್ಥಳೀಯ ಆರೋಗ್ಯ ಆಯೋಗ ಶನಿವಾರ ತಿಳಿಸಿದೆ
Next Story





