ನ್ಯೂಪಡ್ಪು: ರಮಝಾನ್ ಕಿಟ್ ವಿತರಣೆ

ಮಂಗಳೂರು, ಮೇ 2: ಹರೇಕಳ ನ್ಯೂಪಡ್ಪುವಿನ ತ್ವಾಹ ಜುಮಾ ಮಸ್ಜಿದ್ ಮತ್ತು ರೌಲತುಲ್ ಉಲೂಮ್ ಮದ್ರಸ ಹಾಗೂ ಅನಿವಾಸಿ ನ್ಯೂಪಡ್ಪುವಿನ ಸಹೋದರರ ಸಹಾಯ-ಸಹಕಾರದಿಂದ ವತಿಯಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾಗಿರುವ ನ್ಯೂಪಡ್ಪು ಮೊಹಲ್ಲಾ ವ್ಯಾಪ್ತಿಯ ಜಮಾಅತರಿಗೆ ಕಾರುಣ್ಯದ ರಮಝಾನ್ ಕಿಟ್ ಹಾಗೂ ಸರ್ವ ಧರ್ಮಿಯರಿಗೆ ಸಾಂತ್ವನ ಕಿಟ್ ಗಳನ್ನು ಇತ್ತೀಚೆಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ತ್ವಾಹಾ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಖಾಲಿದ್ ಬಿ., ಉಪಾಧ್ಯಕ್ಷರಾದ ಅಬ್ದುಲ್ಲತೀಫ್ ಯು., ಪ್ರಧಾನ ಕಾರ್ಯದರ್ಶಿ ಅಬ್ದುರ್ರಶೀದ್ ಎಚ್., ಕಾರ್ಯದರ್ಶಿಗಳಾದ ಮುಹಮ್ಮದ್ ಅಶ್ರಫ್, ಮುಹಿನುದ್ದೀನ್ ಬಿ., ಕಮಿಟಿ ಸದಸ್ಯರಾದ ನುಹ್ಮಾನ್ ಐ.ಎನ್., ಬದ್ರುದ್ದೀನ್, ಮುಹಮ್ಮದ್ ಆಸಿಫ್ ಹಾಗೂ ಜಮಾಅತಿನ ಪ್ರಮುಖರಾದ ಉಸ್ಮಾನ್ ಎ.ಎಚ್., ಇಮ್ತಿಯಾಝ್ ಬಿ., ಉಬೈದ್, ಸಿದ್ದೀಕ್, ಅಶ್ರಫ್, ಸಫ್ವಾನ್, ಶಫೀಕ್ ಮತ್ತಿತರರು ಉಪಸ್ಥಿತರಿದ್ದರು.
Next Story





