ಪಾಲ್ಘರ್ ಥಳಿಸಿ ಹತ್ಯೆ ಪ್ರಕರಣದ ಆರೋಪಿಗೆ ಕೊರೋನ ಸೋಂಕು
ಮುಂಬೈ: ದೇಶಾದ್ಯಂತ ಆಕ್ರೋಶ ಸೃಷ್ಟಿಸಿರುವ ಪಾಲ್ಘರ್ ಗುಂಪು ಥಳಿತ ಪ್ರಕರಣದ ಆರೋಪಿಗಳಲ್ಲೊಬ್ಬನಿಗೆ ಕೊರೋನ ಸೋಂಕು ದೃಢಪಟ್ಟಿದೆ. ಆತನನ್ನು ಆರಂಭದಲ್ಲಿ ಪಾಲ್ಘರ್ ಗ್ರಾಮೀಣ ಆಸ್ಪತ್ರೆಯ ಐಸೊಲೇಶನ್ ವಾರ್ಡ್‍ನಲ್ಲಿರಿಸಲಾಗಿತ್ತಾದರೂ ನಂತರ ಜೆ ಜೆ ಆಸ್ಪತ್ರೆಯ ಕೈದಿಗಳ ವಾರ್ಡ್‍ಗೆ ಸ್ಥಳಾಂತರಿಸಲಾಗಿದೆ.
ಇತರ 20 ಆರೋಪಿಗಳೊಂದಿಗೆ ಒಂದೇ ಸೆಲ್ ನಲ್ಲಿರಿಸಲಾಗಿದ್ದ ಸಂದರ್ಭ ಆತನಿಗೆ ಸೋಂಕು ತಗಲಿರಬಹುದೆಂದು ಶಂಕಿಸಲಾಗಿದೆ.
ಮಕ್ಕಳ ಅಪಹರಣಕಾರರೆಂಬ ಶಂಕೆಯಿಂದ ಇಬ್ಬರು ಸಾಧುಗಳು ಮತ್ತವರ ಕಾರು ಚಾಲಕನ ಹತ್ಯೆಗೆ ಕಾರಣವಾದ ಪಾಲ್ಘರ್ ಘಟನೆ ಸಂಬಂಧ ಪೊಲೀಸರು ಬಂಧಿಸಿದ್ದ ಒಂಬತ್ತು ಅಪ್ರಾಪ್ತರು ಸೇರಿದಂತೆ 115 ಮಂದಿಯಲ್ಲಿ ಈ ಆರೋಪಿಯೂ ಸೇರಿದ್ದಾನೆ. ಅಪ್ರಾಪ್ತರನ್ನು ಭಿವಂಡಿಯ ರಿಮಾಂಡ್ ಹೋಂನಲ್ಲಿರಿಸಲಾಗಿದೆ. ಆರೋಪಿಗಳೆಲ್ಲರನ್ನೂ ಶುಕ್ರವಾರ ದಹಾನು ನ್ಯಾಯಾಲಯದೆದುರು ಹಾಜರುಪಡಿಸಲಾಗಿದ್ದು ಅವರನ್ನು ಮೇ 13ರ ತನಕ ಸಿಬಿಐ ಕಸ್ಟಡಿಗೆ ವಹಿಸಲಾಗಿದೆ.
Next Story