Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸಜಿಪನಡು: ವಿದ್ಯಾರ್ಥಿ ವೇತನದಿಂದ...

ಸಜಿಪನಡು: ವಿದ್ಯಾರ್ಥಿ ವೇತನದಿಂದ ಬಡವರಿಗೆ ಉಚಿತ ಔಷಧ ವಿತರಿಸಿದ ಮುಹಮ್ಮದ್ ಅಫ್ರೀಝ್

ದಾನಿಗಳ ನೆರವಿನಿಂದ 1.25 ಲಕ್ಷ ರೂ. ಮೌಲ್ಯದ ದಿನಸಿ ವಿತರಣೆ

ನಾಸಿರ್ ಸಜಿಪನಾಸಿರ್ ಸಜಿಪ2 May 2020 5:07 PM IST
share
ಸಜಿಪನಡು: ವಿದ್ಯಾರ್ಥಿ ವೇತನದಿಂದ ಬಡವರಿಗೆ ಉಚಿತ ಔಷಧ ವಿತರಿಸಿದ ಮುಹಮ್ಮದ್ ಅಫ್ರೀಝ್

ಬಂಟ್ವಾಳ: ಬಡವರ ಸಂಕಷ್ಟಕ್ಕೆ ಆಸರೆಯಾಗಬೇಕೆಂಬ ಮನಸ್ಸಿದ್ದರೆ ಯಾವ ರೀತಿಯಲ್ಲಿ ಬೇಕಾದರೂ ಸ್ಪಂದಿಸಬಹುದು ಎಂಬುದಕ್ಕೆ, ಸಮಾಜಕ್ಕೆ ತನ್ನಿಂದ ಏನಾದರೂ ಉಪಯೋಗ ಆಗಬೇಕೆಂಬ ಕನಸಿದ್ದರೆ ಅದನ್ನು ಹೇಗಾದರೂ ನನಸು ಮಾಡಬಹುದು ಎಂಬುವುದಕ್ಕೆ ತಾಲೂಕಿನ ಸಜಿಪನಡು ಗ್ರಾಮದ ಗೋಳಿಪಡ್ಪು ನಿವಾಸಿ ಮುಹಮ್ಮದ್ ಅಫ್ರೀಝ್ ಮಾದರಿಯಾಗಿ ನಿಲ್ಲುತ್ತಾನೆ.

ಕೊರೋನ ವೈರಸ್ ಜಗತ್ತಿನೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಭಾರತದಲ್ಲೂ ಅಪಾರ ಸಂಖ್ಯೆಯಲ್ಲಿ ಸೋಂಕು ಪೀಡಿತರಾಗಿದ್ದಾರೆ ಮತ್ತು ಹಲವು ಸಾವುಗಳು ಸಂಭವಿಸಿದೆ. ಈ ನಡುವೆ ಇದನ್ನು ತಡೆಗಟ್ಟಲು ದೇಶದೆಲ್ಲೆಡೆ ಲಾಕ್‌ಡೌನ್ ಘೋಷಿಸಲಾಗಿದೆ. ಲಾಕ್‌ಡೌನ್ ಕೊರೋನ ತಡೆಗಟ್ಟುವ ತನ್ನ ಉದ್ದೇಶವನ್ನು ಪೂರ್ತಿಮಾಡಲು ಸಹಕರಿಸುತ್ತಿವೆಯಾದರೂ ಬಡವರು, ಕೂಲಿ ಕಾರ್ಮಿಕರು, ನಿರಾಶ್ರಿತರ ಪಾಲಿಗೆ ಸಂಕಷ್ಟವನ್ನು ತಂದೊಡ್ಡಿದೆ. ದಿನನಿತ್ಯದ ಖರ್ಚಿಗೂ ಸರಿಯಾಗಿ ಹಣ ಸಿಗದೆ, ಅನ್ನಕ್ಕೂ ಕಷ್ಟಪಡಬೇಕಾದ ಪರಿಸ್ಥಿತಿ ಇದೆ. ಇದು ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಪ್ರತೀ ಗಾಮಗಳಲ್ಲೂ ಇದೆ. ತಿನ್ನಲು ಸರಿಯಾಗಿ ಅನ್ನ ಸಿಗದೆ ಪರಿತಪಿಸುವ ಹಲವರಿದ್ದಾರೆ. ದುಡಿಮೆಯಿಲ್ಲದೇ, ಕೈಯಲ್ಲಿ ಹಣವಿಲ್ಲದೇ ಕಷ್ಟದಲ್ಲೇ ದಿನದೂಡುವ ಸಾಕಷ್ಟು ಮಂದಿ ನಮ್ಮೆಡೆ ಇದ್ದಾರೆ.

ಇವರ ಸಂಕಷ್ಟದ ದಿನಗಳನ್ನು ಅರ್ಥೈಸಿದ ವಿದ್ಯಾರ್ಥಿ ಅಫ್ರೀಝ್ ತನ್ನಿಂದಾಗುವಷ್ಟು ಸಹಾಯ ಮಾಡಬೇಕೆಂಬ ಸಂಕಲ್ಪ ಮಾಡುತ್ತಾನೆ. ಕೆಲವರಿಗಾದರೂ ತನ್ನಿಂದ ಸಹಾಯ ಆಗಬಹುದೆಂದು ನಿರ್ಧರಿಸಿ ಹಲವು ದಾನಿಗಳ ಮೊರೆ ಹೋಗುತ್ತಾನೆ. ಸಹಾಯ ಬೇಡುತ್ತಾನೆ. ಬಡವರ ಸಂಕಷ್ಟಕ್ಕೆ ಧ್ವನಿಯಾಗಲು ಕೇಳಿಕೊಳ್ಳುತ್ತಾನೆ. ಉದ್ದೇಶಿಸಿದಂತೆಯೇ ಹಲವರು ಸಹಾಯ ಮಾಡುತ್ತಾರೆ. ದಿನಸಿ ವಿತರಿಸುವ ಕಾರ್ಯವನ್ನು ಪ್ರೋತ್ಸಾಹಿಸುತ್ತಾರೆ ಮತ್ತು ಹಲವರು ಅಫ್ರೀಝ್ ಜೊತೆ ಕೈಜೋಡಿಸುತ್ತಾರೆ.

1.25 ಲಕ್ಷ ರೂ. ಮೌಲ್ಯದ 280 ಕಿಟ್ ವಿತರಣೆ

ಹೀಗೆ ಹಲವರಿಂದ ಸುಮಾರು 1.25 ಲಕ್ಷ ರೂ. ಗಳನ್ನು ಸಂಗ್ರಹಿಸಿದ ಅಫ್ರೀಝ್ ಅದರಿಂದ ಬಡವರಿಗೆ ಬೇಕಾದ ಅಗತ್ಯ ದಿನಗಳನ್ನು ಖರೀದಿಸುತ್ತಾನೆ. ಜೊತೆಗೆ ಪಿಕಪ್ ವಾಹನವೊಂದನ್ನು ಬಾಡಿಗೆ ಪಡೆದು, ತನ್ನ ಗ್ರಾಮದ ಯುವಕರ ಸಹಾಯದೊಂದಿಗೆ ಗ್ರಾಮದ ಅರ್ಹರಿಗೆ ಸುಮಾರು 180 ರಷ್ಟು ಕಿಟ್ ಗಳನ್ನು ಹಂಚುತ್ತಾನೆ. ವಿದ್ಯಾರ್ಥಿಯ ಕಾರ್ಯವನ್ನು ಬೆಂಬಲಿಸಿದ ಯುನೈಟೆಡ್ ಹೆಲ್ಪ್ ಲೈನ್ ತಂಡವು 100 ಕಿಟ್ ಗಳನ್ನು ನೀಡುತ್ತದೆ. ಹೀಗೆ ಒಟ್ಟಾರೆ 280 ರಷ್ಟು ಕಿಟ್ ಗಳನ್ನು ಅರ್ಹರಿಗೆ ಹಂಚಿದ್ದಾನೆ.

ಸ್ಕಾಲರ್ಶಿಪ್ ಹಣ ಬಡವರ ಔಷಧಿಗೆ

ಪುತ್ತೂರಿನ ಖಾಸಗಿ ಕಾಲೇಜ್ ನಲ್ಲಿ ದ್ವಿತೀಯ ವರ್ಷದ ಎಲ್.ಎಲ್.ಬಿ ಕಲಿಯುತ್ತಿರುವ ಅಫ್ರೀಝ್ ಬಡವರಿಗೆ ಕಿಟ್ ಗಳನ್ನು ವಿತರಿಸಿದ್ದು ಮಾತ್ರವಲ್ಲದೇ ತನಗೆ ದೊರೆತ ವಿದ್ಯಾರ್ಥಿ ವೇತನದ ಹಣವನ್ನು ಬಡವರಿಗಾಗಿ ಮೀಸಲಿಟ್ಟಿದ್ದಾನೆ. ವಿದ್ಯಾರ್ಥಿ ವೇತನದ ರೂಪದಲ್ಲಿ ತನಗೆ ದೊರೆತಿದ್ದ 8 ಸಾವಿರ ರೂ. ಗಳನ್ನು ಬಡವರಿಗೆ ಔಷದಿ ಪೂರೈಸಲು ನೀಡಿದ್ದಾನೆ. ತನ್ನ ಗ್ರಾಮದ ಔಷಧಿ ಅಗತ್ಯವಿರುವ ಬಡವರನ್ನು ಸಂಪರ್ಕಿಸಿ, ಔಷದಿಯ ಚೀಟಿ ಪಡೆದು ತನ್ನದೇ ಹಣದಿಂದ ಉಚಿತವಾಗಿ ಅವರಿಗೆ ಔಷಧಿ ನೀಡಿದ್ದಾನೆ. ಈ ಮೂಲಕ ಅಫ್ರೀಝ್ ವಿದ್ಯಾರ್ಥಿ ದೆಸೆಯಿಂದಲೇ ಸಮಾಜಮುಖಿ ಕಾರ್ಯಗಳನ್ನು ಮಾಡಿ ಇತರೆ ವಿದ್ಯಾರ್ಥಿಗಳು, ಯುವಕರಿಗೆ ಮಾದರಿಯಾಗಿದ್ದಾನೆ.

ಹಲವು ದಾನಿಗಳ ಸಹಾಯದಿಂದ ತಾಲೂಕಿನ ಹಲವು ಪ್ರದೇಶಗಳಿಗೆ 284 ರಷ್ಟು ಬಡ ಕುಟುಂಬಗಳಿಗೆ ಅಗತ್ಯ ಸಾಮಾಗ್ರಿಗಳನ್ನು ತಲುಪಿಸಿದ್ದೇನೆ. ನನಗೆ ಸಿಕ್ಕ ವಿದ್ಯಾರ್ಥಿ ವೇತನದ 8,000 ರೂ. ಗಳಿಂದ ಬಡವರಿಗೆ ಬೇಕಾದ ಔಷಧಿ ನೀಡಿದ್ದೇನೆ. ಬಡವರು ಸಂಕಷ್ಟದಲ್ಲಿರುವಾಗ ವಿದ್ಯಾರ್ಥಿ ವೇತನವನ್ನು ನಾನು ಖರ್ಚು ಮಾಡುವುದು ಸರಿಯಲ್ಲ ಎಂದುಕೊಂಡು ಅವರಿಗೆ ಔಷಧಿ ಖರೀದಿಸಿ ಕೊಟ್ಟಿದ್ದೇನೆ. ಸ್ನೇಹಿತರು, ಊರಿನ ಯುವಕರು, ಸೇವಾ ಸಂಸ್ಥೆಗಳು ಹಾಗೂ ವಿಶೇಷವಾಗಿ ಯುನೈಟೆಡ್ ಫ್ರೆಂಡ್ಸ್ ಹೆಲ್ಪ್ಲೈನ್ ಗ್ರೂಪ್ ತುಂಬಾ ಸಹಕಾರ ನೀಡಿದೆ. ಅವರಿಗೆ ನಾನು ಅಭಾರಿ

-ಮುಹಮ್ಮದ್ ಅಫ್ರೀಝ್, ಕಾನೂನು ವಿದ್ಯಾರ್ಥಿ

share
ನಾಸಿರ್ ಸಜಿಪ
ನಾಸಿರ್ ಸಜಿಪ
Next Story
X