ಉಡುಪಿ: 12 ಮಂದಿ ಮತ್ತೆ ಐಸೋಲೇಷನ್ ವಾರ್ಡಿಗೆ ದಾಖಲು
ಉಡುಪಿ, ಮೇ 2: ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿನ ಪರೀಕ್ಷೆಗಾಗಿ ರೋಗದ ಲಕ್ಷಣ ಹೊಂದಿರುವ 12 ಮಂದಿ ಶನಿವಾರ ಜಿಲ್ಲೆಯ ವಿವಿಧ ಆಸ್ಪತ್ರೆಗಳ ಐಸೋಲೇಷನ್ ವಾರ್ಡಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ದಾಖಲಾದ 12 ಮಂದಿಯಲ್ಲಿ 9ಮಂದಿ ಪುರುಷರು ಹಾಗೂ ಮೂವರು ಮಹಿಳೆಯರಿದ್ದಾರೆ. ಇವರಲ್ಲಿ ಒಬ್ಬರು ಕೋವಿಡ್ ಶಂಕಿತರಾದರೆ, ಎಂಟು ಮಂದಿಯಲ್ಲಿ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಉಳಿದ ಮೂವರು ಶೀತಜ್ವರದ ಬಾಧೆಗಾಗಿ ಆಸ್ಪತ್ರೆಗೆ ದಾಖಲಾಗಿ ದ್ದಾರೆ. ಶನಿವಾರ 10 ಮಂದಿ ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದು, 50 ಮಂದಿ ಇನ್ನೂ ಅದೇ ವಾರ್ಡಿನಲ್ಲಿ ವೈದ್ಯರ ನಿಗಾದಲ್ಲಿ ದ್ದಾರೆ. ಈವರೆಗೆ ಒಟ್ಟಾರೆಯಾಗಿ 356 ಮಂದಿ ಆಸ್ಪತ್ರೆಯ ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
ಶುಕ್ರವಾರ ಕೊರೋನ ಸೋಂಕಿನ ಗುಣಲಕ್ಷಣಗಳನ್ನು ಹೊಂದಿರುವ ಇನ್ನೂ 14 ಮಂದಿಯ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಎರಡು ಕೋವಿಡ್ ಶಂಕಿತರದ್ದಾದರೆ, ನಾಲ್ಕು ಮಾದರಿಗಳು ತೀವ್ರ ಉಸಿರಾಟದ ತೊಂದರೆಯ ವರದು. 7 ಮಂದಿ ಶೀತಜ್ವರ ದಿಂದ ಬಳಲುತ್ತಿರುವವರ ಹಾಗೂ ಕೊರೋನ ಹಾಟ್‌ಸ್ಪಾಟ್‌ನಿಂದ ಬಂದ ಒಬ್ಬರ ಸ್ಯಾಂಪಲ್‌ನ್ನು ಸಹ ಕೊರೋನ ಸೋಂಕಿನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಾ.ಸೂಡ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ನೋವೆಲ್ ಕೊರೋನ ವೈರಸ್ ಸೋಂಕಿನ ಪರೀಕ್ಷೆಗಾಗಿ ಬಾಕಿ ಉಳಿದಿದ್ದ ಒಟ್ಟು 47 ಸ್ಯಾಂಪಲ್‌ಗಳಲ್ಲಿ ಶನಿವಾರ 11 ಮಾದರಿಗಳ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಫಲಿತಾಂಶವನ್ನು ನೀಡಿವೆ. ಇದರಿಂದ ಇನ್ನು ಬಾಕಿ ಇರುವ 36 ಮಾದರಿಗಳೊಂದಿಗೆ ಇಂದು ಕಳುಹಿಸ ಲಾದ 14 ಮಾದರಿ ಗಳು ಸೇರಿ ಒಟ್ಟು 50 ಸ್ಯಾಂಪಲ್‌ಗಳ ವರದಿ ಬರಬೇಕಾಗಿದೆ ಎಂದವರು ಹೇಳಿದರು.
ಜಿಲ್ಲೆಯಲ್ಲಿ ನೋವೆಲ್ ಕೊರೋನ ವೈರಸ್ ಸೋಂಕಿನ ಪರೀಕ್ಷೆಗಾಗಿ ಬಾಕಿ ಉಳಿದಿದ್ದ ಒಟ್ಟು 47 ಸ್ಯಾಂಪಲ್‌ಗಳಲ್ಲಿ ಶನಿವಾರ 11 ಮಾದರಿಗಳ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಫಲಿತಾಂಶವನ್ನು ನೀಡಿವೆ. ಇದರಿಂದ ಇನ್ನು ಬಾಕಿ ಇರುವ 36 ಮಾದರಿಗಳೊಂದಿಗೆ ಇಂದು ಕಳುಹಿಸ ಲಾದ 14 ಮಾದರಿ ಗಳು ಸೇರಿ ಒಟ್ಟು 50 ಸ್ಯಾಂಪಲ್‌ಗಳ ವರದಿ ಬರಬೇಕಾಗಿದೆ ಎಂದವರು ಹೇಳಿದರು. ಈ ಮೂಲಕ ಶನಿವಾರದವರೆಗೆ ಜಿಲ್ಲೆಯಿಂದ ಕಳುಹಿಸಿದ ಒಟ್ಟು 1177 ಮಂದಿಯ ಸ್ಯಾಂಪಲ್‌ಗಳಲ್ಲಿ 1127ರ ವರದಿ ಬಂದಿದ್ದು, 1124 ನೆಗೆಟಿವ್ ಹಾಗೂ ಮೂರು ಪಾಸಿಟಿವ್ ಆಗಿ ಬಂದಿವೆ.
ಈ ಮೂಲಕ ಶನಿವಾರದವರೆಗೆ ಜಿಲ್ಲೆಯಿಂದ ಕಳುಹಿಸಿದ ಒಟ್ಟು 1177 ಮಂದಿಯ ಸ್ಯಾಂಪಲ್‌ಗಳಲ್ಲಿ 1127ರ ವರದಿ ಬಂದಿದ್ದು, 1124 ನೆಗೆಟಿವ್ ಹಾಗೂ ಮೂರು ಪಾಸಿಟಿವ್ ಆಗಿ ಬಂದಿವೆ. ಜಿಲ್ಲೆಯಲ್ಲಿ ಕೋವಿಡ್-19ರ ವಿವಿಧ ಕಾರಣಗಳಿಗಾಗಿ ಇಂದು 46 ಮಂದಿಯನ್ನು ಹೊಸ ದಾಗಿ ನೋಂದಣಿ ಮಾಡಿಕೊಳ್ಳಲಾಗಿದೆ. ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 3652 ಮಂದಿಯನ್ನು ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 2313 (ಇಂದು 65) ಮಂದಿ 28 ದಿನಗಳ ನಿಗಾವನ್ನೂ, 3118 (86) ಮಂದಿ 14 ದಿನಗಳ ನಿಗಾವನ್ನು ಪೂರ್ಣ ಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 446 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 38 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ. ಸುಧೀರ್ ಚಂದ್ರ ಸೂಡ ವಿವರಿಸಿದರು.
ತೆಕ್ಕಟ್ಟೆ, ಸಾಸ್ತಾನದ 18 ಮಂದಿ ವರದಿ ನೆಗೆಟಿವ್: ನಾಲ್ಕು ದಿನಗಳ ಹಿಂದೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿಗೆ ಪಾಸಿಟಿವ್ ಬಂದ ವ್ಯಕ್ತಿಯೊಂದಿಗೆ ಉಡುಪಿ ಜಿಲ್ಲೆಯಲ್ಲಿ ಸಂಪರ್ಕಕ್ಕೆ ಬಂದ ತೆಕ್ಕಟ್ಟೆ ಪೆಟ್ರೋಲ್ ಬಂಕ್ ಹಾಗೂ ಸಾಸ್ತಾನ ಟೋಲ್‌ಗೇಟ್‌ನ ಒಟ್ಟು 18 ಮಂದಿ ಸಿಬ್ಬಂದಿಗಳ ಗಂಟಲು ದ್ರವದ ಮಾದರಿ ನೆಗೆಟಿವ್ ಆಗಿ ಬಂದಿದೆ. ಆದರೆ ಇವರೆಲ್ಲರ ಆಸ್ಪತ್ರೆ ಕ್ವಾರಂಟೈನ್ 14 ದಿನಗಳವರೆಗೆ ಮುಂದುವರಿಯಲಿದೆ ಎಂದು ಡಿಎಚ್‌ಓ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಮೃತ ಮಗು, ಗರ್ಭಿಣಿ ವರದಿ ನೆಗೆಟಿವ್
ಗುರುವಾರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟ ಗಂಗೊಳ್ಳಿಯ 1.9 ವರ್ಷ ಪ್ರಾಯದ ಮಗು ಹಾಗೂ ಬ್ರಹ್ಮಾವರ ಹೇರೂರಿನ ತುಂಬು ಗರ್ಭಿಣಿಗೆ ಶಂಕಿತ ಕೊರೋನ ಸೋಂಕಿನ ಪರೀಕ್ಷೆ ನಡೆಸಲಾಗಿದ್ದು, ಇಬ್ಬರ ವರದಿಗಳೂ ನೆಗೆಟಿವ್ ಆಗಿ ಬಂದಿವೆ ಎಂದು ಡಿಎಚ್‌ಓ ಡಾ.ಸುಧೀರ್‌ಚಂದ್ರ ಸೂಡ ಸ್ಪಷ್ಟಪಡಿಸಿದ್ದಾರೆ.
ಗಂಗೊಳ್ಳಿಯ ಮಗು ತೀವ್ರ ಉಸಿರಾಟ ತೊಂದರೆ ಹಾಗೂ ಕೆಮ್ಮುವಿಗಾಗಿ ಕುಂದಾಪುರದ ಆಸ್ಪತ್ರೆಗೆ ದಾಖಲಾಗಿದ್ದು, ಸ್ಥಿತಿ ವಿಷಮಿಸಿದ್ದರಿಂದ ಮಗುವನ್ನು ಮಣಿಪಾಲ ಕೆಎಂಸಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಅಸುನೀಗಿತ್ತು. ಮಗುವಿನಲ್ಲಿ ಕೊರೋನ ಗುಣಲಕ್ಷಣವಿದ್ದ ಕಾರಣ ಮಾದರಿಯನ್ನು ಪಡೆದು ಮಂಗಳೂರಿಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು.
ಅದೇ ರೀತಿ ಬ್ರಹ್ಮಾವರ ಸಮೀಪದ ಎಂಟೂವರೆ ತಿಂಗಳ ತುಂಬು ಗರ್ಭಿಣಿ ರಕ್ತದೊತ್ತಡದ ಏರುಪೇರು ಹಾಗೂ ಇತರ ಸಮಸ್ಯೆಗಳಿಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದು, ಆಕೆಗೂ ಕೊರೋನ ಟೆಸ್ಟ್ ನಡೆಸಲಾಗಿತ್ತು. ಈ ಎರಡು ಪ್ರಕರಣಗಳನ್ನೂ ಆದ್ಯತೆ ನೆಲೆಯಲ್ಲಿ ಪರಿಗಣಿಸಿದ ಕಾರಣ ಎರಡರ ಮಾದರಿ ಪರೀಕ್ಷೆ ಶುಕ್ರವಾರವೇ ಬಂದಿದ್ದು, ಎರಡೂ ನೆಗೆಟಿವ್ ಆಗಿವೆ ಎಂದು ಡಿಎಚ್‌ಓ ತಿಳಿಸಿದರು.
ಗಾಳಿಸುದ್ದಿ: ಉಡುಪಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿರುವ ಮೂವರು ಯುವಕರ ಪೈಕಿ ಇಬ್ಬರಲ್ಲಿ ಮತ್ತೆ ಜ್ವರ ಕಾಣಿಸಿಕೊಂಡಿದೆ ಎಂಬುದು ಕೇವಲ ಗಾಳಿಸುದ್ದಿಯಾಗಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಉಡುಪಿಯಲ್ಲಿ ಸೋಂಕು ಪತ್ತೆ ಯಾಗಿ ಗುಣಮುಖ ರಾದ ಮೂವರು ಯುವಕರು ಆರೋಗ್ಯದಿಂದಿದ್ದಾರೆ ಎಂದು ಡಾ.ಸುಧೀರ್ ಚಂದ್ರ ಸೂಡ ಸ್ಪಷ್ಟಪಡಿಸಿದ್ದಾರೆ.







