‘ಹೂವುಗಳ ಬದಲು ಆಸ್ಪತ್ರೆಗಳ ಮೇಲೆ ಪಿಪಿಇ ಕಿಟ್ ಗಳನ್ನು ಸುರಿಯಿರಿ’
ಸೇನಾ ಮುಖ್ಯಸ್ಥರ ಸುದ್ದಿಗೋಷ್ಠಿ ವಿರುದ್ಧ ಟ್ವಿಟರಿಗರ ಆಕ್ರೋಶ
ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗಾಗಿ ರವಿವಾರ ಸಶಸ್ತ್ರ ಪಡೆಗಳು ಹೂಮಳೆಗರೆಯಲಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತಿಳಿಸಿದ ಬೆನ್ನಿಗೆ, ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ನಿಜಕ್ಕೂ ಬೇಕಾಗಿರುವುದು ಕಿಟ್ ಗಳು, ರಕ್ಷಣಾ ಸಲಕರಣೆಗಳು ಹೊರತು ಹೂವಿನ ಎಸಳುಗಳಲ್ಲ ಎಂದು ಹಲವು ಟ್ವಿಟರಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಪಿಪಿಇ, ಆಹಾರದ ಪ್ಯಾಕೆಟ್ ಗಳು ಮತ್ತು ಇತರ ಅಗತ್ಯ ಸಾಮಗ್ರಿಗಳು ಆದ್ಯತೆಯಾಗಿರದ ಕಾರಣ ಸರ್ಕಸ್ ಶೋಗೆ ಸಿದ್ಧರಾಗಿ. ಹೂವಿನ ಎಸಳುಗಳು ಬೇಕೇ ಬೇಕು. ಏಕೆಂದರೆ ಇದು ನಮ್ಮ ದೇಶದ ಅಂತ್ಯಸಂಸ್ಕಾರ” ಎಂದು ಶ್ರುತಿ ಜೈನ್ ಎಂಬವರು ಟ್ವೀಟ್ ಮಾಡಿದ್ದಾರೆ.
“ಹೂವಿನ ಎಸಳುಗಳನ್ನು ಸುರಿಯುವ ಬದಲು ಪಿಪಿಇ ಕಿಟ್ ಗಳನ್ನು ಸುರಿದರೆ ಹೇಗೆ?, ಇದು ಕೋವಿಡ್ 19 ಹೋರಾಟಗಾರರಿಗೆ ಉತ್ತಮ ಧನ್ಯವಾದದ ವಿಧಾನ. ದೇಶದ ಹಣವನ್ನು ಸೂಕ್ಷ್ಮ ವಿಚಾರಗಳಿಗೆ ಬಳಸೋಣ” ಎಂದು ನಮಿತಾ ಹಂಡಾ ಟ್ವೀಟ್ ಮಾಡಿದ್ದಾರೆ.
“ಕೋವಿಡ್ 19 ವಿರುದ್ಧದ ಹೋರಾಟಕ್ಕೆ ಸೂಕ್ತ ಯೋಜನೆಗಳ ಬದಲು ಸಿಡಿಎಸ್ ಬಿಪಿನ್ ರಾವತ್ ಹೂಗಳ ಶೋನಲ್ಲಿ ಬ್ಯುಸಿಯಾಗಿದ್ದಾರೆ” ಎಂದು ಆಮಿರ್ ಖಾನ್ ಎನ್ನುವ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ಮೇ 3ರಂದು ವಿಶೇಷ ಕೃತಜ್ಞತೆಯ ಸೂಚಕವಾಗಿ ಕೆಲವು ವಿಶೇಷ ಚಟುವಟಿಕೆಗಳು ನಡೆಯಲಿವೆ. ವಾಯುಪಡೆಯು ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಫ್ಲೈ ಪಾಸ್ಟ್ ಗಳನ್ನು ನಡೆಸಲಿದೆ. ದೇಶದ ಉದ್ದಗಲದಲ್ಲಿ ಈಶಾನ್ಯದ ಅಸ್ಸಾಂನಿಂದ ಗುಜರಾತ್‌ನ ಕಛ್ ತನಕ ಫ್ಲೈ ಪಾಸ್ಟ್ ನಡೆಸಲಾಗುವುದು. ರಾಷ್ಟ್ರವು ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ ಆಸ್ಪತ್ರೆಗಳನ್ನು ಗೌರವಿಸಲು ಹೆಲಿಕಾಪ್ಟರ್‌ಗಳು ಆಸ್ಪತ್ರೆಗಳ ಮೇಲೆ ಹೂದಳಗಳನ್ನು ಸುರಿಸಲಿವೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿನ ಕಟ್ಟಡಗಳ ಹೊರಗೆ ಸೇನಾ ಬ್ಯಾಂಡ್‌ಗಳು ಮೊಳಗಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಬಿಪಿನ್ ರಾವತ್ ತಿಳಿಸಿದ್ದರು.
Get ready for a circus show because PPE, food packets, and other sanitary essentials distribution is definitely not a priority. Flower petals sure, because it's our country's funeral.
— Shruti Jain (@shrutijain1996) May 1, 2020
What a great use of our resources! #India #Covid_19 https://t.co/Z1UrtvWDKH
Dear Chief of Defence Staff (CDS) General Bipin Rawat, instead of showering flower petals how about you shower some PPE kits. A better way to thank our #COVID__19 workers. Don’t you think? Let’s use the country’s money for something more sensible. Puleezzz!
— Namita Handa Jolly (@namitahanda) May 2, 2020
Instead of planning comprehensive response against #covid_19 His Excellency #CDS Gen Bipin Rawat is busy organising Flower & Petals Show.
— Amir Khan (@Amir__Khann) May 2, 2020
Gentlemen, a big round of applause for Indian Armed Forces https://t.co/F1KXvNEOpH
Is CDS Bipin Rawat modern day Wilhelm Keitel of Nazi Germany?
— Ganesh Mantravadi (@ganeshmantra) May 1, 2020
Why does he need behave like a stooge of the Government?
Can't he question the mindless exercise of flower showering on hospitals in full blown pandemic and an ongoing economic crisis?
This is a dangerous precedent.
Someone please tell #BipinRawat how to wear a mask. The man is literally chewing it while talking. That's dangerous. I am so worried for him! #COVID2019india #ARMY pic.twitter.com/d9p0KrnHUn
— Aritry Das (@aritry) May 1, 2020
AT LEAST GIVE SOME SOLID RELAXATIONS in GREEN ZONES.!!
— सय्यद अज़ीम (#StayHomeStaySafe) (@syed__azeem) May 1, 2020
OR this covid-FLU WILL BE A FAMINE!!!!!#Lockdownextention #lockdown3
& Bipin Rawat is spending millions in flying past from one end to ANOTHER!!!!
HELP THE POOR PLEASE WITH EMPATHY! https://t.co/7mRhY7Elph
When people expected hospitals will get PPE kits the govt is now bringing armed forces to drop flowers..
— Anis Ahmed (@AnisPFI) May 1, 2020
Drama never stops..
Air Force to conduct flypast on Sunday to salute Corona warriors: Bipin Rawat https://t.co/A6RsC3gL7D