ಗೃಹರಕ್ಷಕ ಕಮಾಂಡರ್‌ಗಳಿಗೆ ಶಾಸಕ ಕಾಮತ್ ನೇತೃತ್ವದಲ್ಲಿ ಕಿಟ್ ವಿತರಣೆ
ಮಂಗಳೂರು, ಮೇ 2: ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಿರುವ ಗೃಹರಕ್ಷಕ ಕಮಾಂಡರ್‌ಗಳಿಗೆ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ಮುರಳಿ ಮೋಹನ ಚೂಂತಾರು ಮೂಲಕ ಉಚಿತ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭ ಭಾರತೀಯ ಹೋಮಿಯೋಪಥಿಕ್ ವೈದ್ಯರ ಸಂಘದಿಂದ ಭಾರತ ಸರಕಾರದ ಆಯುಷ್ ಇಲಾಖೆಯಿಂದ ಅನುಮೋದಿಸಲ್ಪಟ್ಟ ಔಷಧಿಗಳನ್ನು ಕೂಡ ಉಚಿತವಾಗಿ ನೀಡಲಾಯಿತು.
ಮನಪಾ ಮೇಯರ್ ದಿವಾಕರ್, ಬಿಜೆಪಿ ದಕ್ಷಿಣ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರೂಪಾ ಡಿ. ಬಂಗೇರ ಹಾಗೂ ಸುರೇಂದ್ರ ಜೆ, ಮನಪಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪೂರ್ಣಿಮಾ,ಬಿಜೆಪಿ ಮುಖಂಡರಾದ ಭಾಸ್ಕರಚಂದ್ರ ಶೆಟ್ಟಿ,ರಮೇಶ್ ಕಂಡೆಟ್ಟು ಗೃಹರಕ್ಷಕ ಉಪ ಕಮಾಂಡರ್ ರಮೇಶ್, ಗೃಹರಕ್ಷಕ ಘಟಕಾಧಿಕಾರಿ ಮಾರ್ಕ್ ಶೆರಾ, ವೈದ್ಯರಾದ ಡಾ. ಪ್ರವೀಣ್ ಕುಮಾರ್ ರೈ, ಡಾ. ಅವಿನಾಶ್ ವಿಎಸ್, ಡಾ. ಪ್ರವೀಣ್‌ರಾಜ್ ಆಳ್ವ, ಡಾ ಪ್ರಸನ್ನ ಕುಮಾರ್, ಡಾ. ರಾಮಕೃಷ್ಣ ರಾವ್ ಉಪಸ್ಥಿತರಿದ್ದರು.
Next Story





