ಹಣ ವಸೂಲಿಗೆ ಬೆದರಿಕೆ: ದೂರು ದಾಖಲು
ಬಂಟ್ವಾಳ, ಎ.2: ಹಿರಿಯ ನಾಗರಿಕರೊಬ್ಬರಿಗೆ ಮಹಿಳೆಯ ಜೊತೆ ಸಂಪರ್ಕ ಕಲ್ಪಿಸಿ ಹಣ ವಸೂಲಿಗೆ ಬೆದರಿಕೆ ಹಾಕುತ್ತಿದ್ದ ಆರೋಪಿಯೊಬ್ಬನ ವಿರುದ್ಧ ಶನಿವಾರ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಟ್ಲ ಕಸ್ಬಾ ಗ್ರಾಮ ನಿವಾಸಿಯಾಗಿರುವ ಹಿರಿಯ ನಾಗರಿಕರೊಬ್ಬರು ಬಾಡಿಗೆಗೆ ನೀಡಿರುವ ಮನೆಯಲ್ಲಿ ಓರ್ವ ಮಹಿಳೆ ಮತ್ತು ಮಗು ವಾಸವಾಗಿದ್ದರು. ಆರೋಪಿ ಉಮ್ಮರ್ ಎಂಬಾತನು ಮಾ.3ರಂದು ಇಬ್ಬರ ನಡುವೆ ಸಂಪರ್ಕ ಕಲ್ಪಿಸಿ, ಬೆದರಿಕೆ ಒಡ್ಡಿ 50 ಸಾವಿರ ರೂ. ಹಣವನ್ನು ವಸೂಲು ಮಾಡಿದ್ದ. ಆ ಬಳಿಕವೂ ಬೇರೆ ನಂಬರ್ ನಿಂದ ಕರೆ ಮಾಡಿ, ಪೊಲೀಸ್ ಮಾತನಾಡುವುದೆಂದು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಮೇ 1ರಂದು ಮನೆಗೆ ಬಂದು ಹಣಕ್ಕಾಗಿ ಬೆದರಿಕೆ ಒಡ್ಡಿದ್ದು, ನೆರೆಮನೆಯವರನ್ನು ಕಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಹಿರಿಯ ನಾಗರಿಕ ಇದೀಗ ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ. ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Next Story





