Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕೊರೋನ: ವಿಪರೀತ ಉತ್ಪ್ರೇಕ್ಷಿತ ಬೆದರಿಕೆ

ಕೊರೋನ: ವಿಪರೀತ ಉತ್ಪ್ರೇಕ್ಷಿತ ಬೆದರಿಕೆ

ನಲಮೋಟು ಚಕ್ರವರ್ತಿನಲಮೋಟು ಚಕ್ರವರ್ತಿ2 May 2020 10:57 PM IST
share
ಕೊರೋನ: ವಿಪರೀತ ಉತ್ಪ್ರೇಕ್ಷಿತ ಬೆದರಿಕೆ

ಕೋವಿಡ್-19 ಹರಡುವುದರ ವಿರುದ್ಧ ಹೋರಾಡಲು ಭಾರತವು ವಿಶ್ವದಲ್ಲೇ ಅತ್ಯಂತ ಕಠಿಣವಾದ ಕ್ರಮಗಳಲ್ಲೊಂದನ್ನು ತೆಗೆದುಕೊಂಡಿದೆ. ಭಾರತದಲ್ಲಿ ಲಾಕ್‌ಡೌನ್ ದೂರಗಾಮಿ ಪರಿಣಾಮಗಳನ್ನು ಬೀರುತ್ತಿದೆ. ವಿಶೇಷವಾಗಿ ಬಡವರಿಗೆ ಹಾಗೂ ದಮನಿತರಿಗೆ ಆರ್ಥಿಕ ವಿನಾಶವನ್ನೇ ತಂದಿದೆ. ಒಂದು ಅಂದಾಜಿನ ಪ್ರಕಾರ ಎಪ್ರಿಲ್ 14ರವರೆಗಿನ 21ದಿನಗಳ ಲಾಕ್‌ಡೌನ್ ಭಾರತದ ಅರ್ಥವ್ಯವಸ್ಥೆಗೆ ದಿನವೊಂದರ 4.64ಬಿಲಿಯ ಡಾಲರ್ (35,000 ಕೋಟಿ ರೂ.)ಗೂ ಹೆಚ್ಚು ನಷ್ಟ ಉಂಟು ಮಾಡಿದೆ. ಅಂದರೆ ಮೂರು ವಾರಗಳಲ್ಲಿ 98 ಬಿಲಯ ಡಾಲರ್ ನಷ್ಟವಾಗಲಿದೆ. ಮೇ 3ರವರೆಗೆ ಲಾಕ್‌ಡೌನ್ ಮುಂದುವರಿಸಿದ್ದರಿಂದ ಅರ್ಥ ವ್ಯವಸ್ಥೆಗೆ ಆಗುವ ಒಟ್ಟು ಹಾನಿ ಎಷ್ಟೆಂದು ಊಹಿಸಿಕೊಳ್ಳಬಹುದು. ಸಾಪ್ತಾಹಿಕ ನಿರುದ್ಯೋಗ ದರ ಮಾರ್ಚ್ 15ರಂದು ಶೇ.6.74 ಇದ್ದದ್ದು ಎಪ್ರಿಲ್ 12ರಂದು ಶೇ.24ಕ್ಕೆ ಏರಿದೆ.

ಆದ್ದರಿಂದ ಕೊರೋನ ವೈರಸ್ ಸಾಂಕ್ರಾಮಿಕ ನಿಜವಾಗಿಯೂ ನಾವು ನಂಬುವಂತೆ ಮಾಡಲಾದಷ್ಟು ಮಾರಕವೇ? ಭಯಾನಕವೇ?. ಸರಕಾರ ಹೇರಿದ ಕಠಿಣ ಲಾಕ್‌ಡೌನ್ ಸಮರ್ಥನೀಯವೇ? ಈ ಸಾಂಕ್ರಾಮಿಕದ ತೀವ್ರತೆಯನ್ನು ಅಳೆಯಲು ಒಂದು ಉತ್ತಮ ಅಧ್ಯಯನ ಪ್ರಕರಣ (ಕೇಸ್‌ಸ್ಟಡಿ) ಎಂದರೆ ಡೈಮಂಡ್ ಪ್ರಿನ್ಸೆಸ್ ಪ್ರವಾಸಿ ಹಡಗು. ಜನವರಿ 20ರಂದು 80ರ ಹರೆಯದ ಓರ್ವ ಪ್ರಯಾಣಿಕ ಜಪಾನಿನ ಯೊಕೊಹಾಮಾ ಬಂದರಿನಲ್ಲಿ ಈ ಹಡಗನ್ನು ಹತ್ತಿದರು. ಬಳಿಕ ಆತನ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಕಂಡು ಬಂತು. ಫೆಬ್ರವರಿ 4ರಂದು ಯೊಕೊಹಾಮಾ ಬಂದರಿನಲ್ಲಿ ಈ ಹಡಗನ್ನು ಕ್ವಾರಂಟೈನ್ ಮಾಡಲಾಯಿತು. ಹಡಗಿನಲ್ಲಿ ಒಟ್ಟು 3,711 ಮಂದಿ ಇದ್ದರು. 1,045 ಮಂದಿ ಸಿಬ್ಬಂದಿ ಮತ್ತು 2,666 ಮಂದಿ ಪ್ರಯಾಣಿಕರು. ಸಿಬ್ಬಂದಿಯ ಸರಾಸರಿ ವಯಸ್ಸು 36 ವರ್ಷ ಮತ್ತು ಪ್ರಯಾಣಿಕರ ಸರಾಸರಿ ವಯಸ್ಸು 69 ವರ್ಷ. ಹಡಗಿನಲ್ಲಿದ್ದ ಪ್ರತಿಯೊಬ್ಬರೂ ನಿಕಟ ಸಂಪರ್ಕದಲ್ಲೇ ಬದುಕುತ್ತಿದ್ದರು.

 ಅಂತಿಮವಾಗಿ, ಈ ದುಸ್ವಪ್ನದಂತಹ ಪರಿಸ್ಥಿತಿಯ ಪರಿಣಾಮವೇನಾಯಿತು? ಹಡಗಿನಲ್ಲಿದ್ದ ಒಟ್ಟು 3,711 ಮಂದಿಯ ಪೈಕಿ ಒಟ್ಟು 696 ಮಂದಿಗೆ ಸೋಂಕುತಗಲಿತು. ಇವರಲ್ಲಿ 12ಮಂದಿ ಮೃತಪಟ್ಟವರು. ಆದರೆ 1,045 ಮಂದಿ ಹಡಗಿನ ಸಿಬ್ಬಂದಿಯಲ್ಲಿ ಒಬ್ಬನೇ ಒಬ್ಬ ಕೂಡ ಸಾಯಲಿಲ್ಲ. ಅಷ್ಟು ಮಂದಿ ಹೇಗೆ ಬದುಕಿ ಉಳಿದರು? ಇದಕ್ಕೆ ಉತ್ತರ: ಅವರೆಲ್ಲರೂ ಸರಾಸರಿ 36 ವಯಸ್ಸಿನ ಯುವಕರು. ಬಹುಪಾಲು ವಯಸ್ಸಾದ ಪ್ರಯಾಣಿಕರೇ ಇದ್ದ ಆ ಹಡಗಿನಲ್ಲಿ ಸೋಂಕಿನಿಂದಾಗಿ ಮೃತಪಟ್ಟವರು ಕೇವಲ ಶೇ.0.3 ಮಂದಿ ಮಾತ್ರ. ಕೋವಿಡ್-19 ಭಾರೀ ಸಾಂಕ್ರಾಮಿಕ ಕಾಯಿಲೆಯಾದರೂ ಆದು ಎಷ್ಟು ಭಯಾನಕ, ಮಾರಣಾಂತಿಕ ಎಂದು ಆರಂಭದಲ್ಲಿ ಜನರಲ್ಲಿ ನಂಬುವಂತೆ ಮಾಡಲಾಯಿತೋ ಅದು ಅಷ್ಟು ಮಾರಕವಲ್ಲ. ಎಪ್ರಿಲ್ 16ರ ವೇಳೆಗೆ ಭಾರತದಲ್ಲಿ ಸಂಭವಿಸಿದ ಒಟ್ಟು ಕೊರೋನ ಸಾವುಗಳ ಸಂಖ್ಯೆ ಸುಮಾರು 414. ವಿಶ್ವ ಆರೋಗ್ಯ ಸಂಸ್ಥೆಯ, 2019ರ ಜಾಗತಿಕ ಕ್ಷಯರೋಗ ವರದಿಯ ಪ್ರಕಾರ ಕ್ಷಯರೋಗ ಒಂದೇ ಭಾರತದಲ್ಲಿ ವಾರ್ಷಿಕ 4,40,000 ಮಂದಿಯನ್ನು ಬಲಿತೆಗೆದುಕೊಳ್ಳುತ್ತದೆ. ಕ್ಷಯರೋಗ ಕೂಡ ಕೋವಿಡ್-19ರ ಹಾಗೆಯೆ ಕ್ಷಯರೋಗಿಗಳು ಕೆಮ್ಮಿದಾಗ ಗಾಳಿಯ ಮೂಲಕ ಹರಡುತ್ತದೆ. ಭಾರತ ಎಂದಾದರೂ ಕ್ಷಯರೋಗ ಹರಡುವುದನ್ನು ತಡೆಯಲು ಲಾಕ್‌ಡೌನ್ ಜಾರಿ ಮಾಡ್ಡಿದಿದೆಯೇ?

2020ರ ಮಾರ್ಚ್ 16ರಂದು ಬ್ರಿಟಿಷ್ ವೈಜ್ಞಾನಿಕ ವರದಿಯೊಂದನ್ನು ಉಲ್ಲೇಖಿಸಿ ದಿ ನ್ಯೂಯಾರ್ಕ್ ಟೈಮ್ಸ್ ಹೀಗೆ ಬರೆಯಿತು: ‘‘ಕೊರೋನ ವೈರಸ್ ಹರಡುವುದನ್ನು ತಡೆದು ಹೊಸ ಸೋಂಕು ಪ್ರಕರಣಗಳು ಸಂಭವಿಸದಂತೆ ಸರಕಾರ ಮತ್ತು ಜನರು ಕ್ರಮ ಕೈಗೊಳ್ಳದಿದ್ದಲ್ಲಿ ಅಮೆರಿಕದಲ್ಲಿ 2.2ಮಿಲಿಯ (22ಲಕ್ಷ) ಜನರು ಸಾಯಬಹುದು’’ ಈ ತರಹದ ಮೀಡಿಯಾದ ಉದ್ರೇಕಕಾರಿ, ಅತಿರಂಜಿತ ಸುದ್ದಿ ( ಸೆನ್ಸೇಶನಲಿಸಂ), ಅಮೆರಿಕದ ಜನರಲ್ಲಿ ಹಾಗೂ ರಾಜಕಾರಣಿಗಳಲ್ಲಿ ಈ ಹಿಂದೆಂದೂ ಕಂಡಿರದಂತಹ ದಿಗಿಲಿಗೆ ಕಾರಣವಾಯಿತು.

ಈಗ ನಾವು ವಿಶ್ವದಾದ್ಯಂತ ಕೋವಿಡ್ -19 ನಿಂದಾಗಿ ಸಂಭವಿಸಿದ ಸಾವುಗಳ ಸಂಖ್ಯೆಗಳನ್ನು ಗಮನಿಸೋಣ: ಚೀನಾದ ಕೋವಿಡ್ -19 ದತ್ತಾಂಶ ನಂಬಲರ್ಹವಲ್ಲ ಎನ್ನಲಾಗಿರುವುದರಿಂದ ಇಟಲಿಯನ್ನು ತೆಗೆದುಕೊಳ್ಳೋಣ. ಎಪ್ರಿಲ್ 16ರವರೆಗೆ ಇಟಲಿಯಲ್ಲಿ 21,645 ಕೋವಿಡ್-19 ಮರಣಗಳು ಸಂಭವಿಸಿರುವುದಾಗಿ ಇಟಲಿಯ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ವರದಿ ಮಾಡಿತ್ತು. ಅದರಲ್ಲಿ ಕೊರೋನ ಸೋಂಕಿನಿಂದಾಗಿ ಮೃತಪಟ್ಟವರಲ್ಲಿ ಶೇ.99 ಮಂದಿಗೆ ಸೋಂಕಿಗೆ ಮೊದಲೇ ವೈದ್ಯಕೀಯ ಅನಾರೋಗ್ಯ ಸ್ಥಿತಿಗಳಿದ್ದವೆಂಬುದು ತಿಳಿದು ಬಂತು. ಸೋಂಕು ಕಾಯಿಲೆಗಳ ಅಂತರ್‌ರಾಷ್ಟ್ರೀಯ ಪತ್ರಿಕೆಯ ಪ್ರಕಾರ 2016-17ರ ಋತುವಿನಲ್ಲಿ ಇಟಲಿಯಲ್ಲಿ ಫ್ಲೂನಿಂದಾಗಿ 24,981 ಮಂದಿ ಮೃತಪಟ್ಟಿದ್ದರು. ಇದನ್ನು ಯಾರಾದರೂ ಗಮನಿಸಿದ್ದಾರೆಯೇ? ಅಂಕಿ ಸಂಖ್ಯೆಗಳು ಹೀಗಿರುತ್ತ ಇಟಲಿ ಕೊರೋನ ಸಾಂಕ್ರಾಮಿಕಕ್ಕೆ ತೋರಿದ ತೀವ್ರವಾದ ಪ್ರತಿಕ್ರಿಯೆ, ತೆಗದುಕೊಂಡ ಕ್ರಮ ಸಮರ್ಥನೀಯವೇ?

ಅಮೆರಿಕದಲ್ಲಿ ಎಪ್ರಿಲ್ 14ರ ವೇಳೆಗೆ 24,582 ಕೋವಿಡ್-19 ಸಾವುಗಳು ಸಂಭವಿಸಿದ್ದವು. ಆ ವೇಳೆಗೆ ನ್ಯೂಯಾರ್ಕ್ ನಗರದಲ್ಲಿ ಕೊರೋನದಿಂದಾಗಿ ಸತ್ತ 6,589 ಮಂದಿಯಲ್ಲಿ ಕೇವಲ 133 ಮಂದಿ ಮಾತ್ರ ಸೋಂಕು ತಗಲುವ ಮೊದಲೇ ಇತರ ಆರೋಗ್ಯ ಸಮಸ್ಯೆಗಳು ಇರದೆ ಇದ್ದವರು. ಇದು ಎಂಟು ಮಿಲಿಯಕ್ಕೂ ಹೆಚ್ಚು ಜನರಿರುವ ನಗರದಲ್ಲಿ ಸಂಭವಿಸಿದ ಸಾವುಗಳ ಅಂಕಿಸಂಖ್ಯೆ. ಒಂದು ಅಂದಾಜಿನ ಪ್ರಕಾರ, 2020ರ ಆಗಸ್ಟ್ 4ರ ವೇಳೆಗೆ ಅಮೆರಿಕದಲ್ಲಿ 80 ಸಾವಿರಕ್ಕೂ ಅಧಿಕ ಮಂದಿ ಕೊರೋನದಿಂದಾಗಿ ಸಾಯಬಹುದು. ಆದರೆ, ಇದನ್ನು ‘ಸಿಡಿಸಿ’ ವರದಿ ಮಾಡಿರುವ , 2017ರಲ್ಲಿ ಸಂಭವಿಸಿದ 2.8 ಮಿಲಿಯ (28 ಲಕ್ಷ) ಸಾವುಗಳೊಂದಿಗೆ, ವಿಶೇಷವಾಗಿ ಇನ್‌ಫ್ಲುಯೆಂಜಾ ವೈರಸ್‌ನಿಂದಾಗಿ ಮೃತಪಟ್ಟವರ ಸಂಖ್ಯೆ (55,672)ಯೊಂದಿಗೆ ಹೋಲಿಸಿ ನೋಡಿ. ಈ ಅಂಕೆ ಸಂಖ್ಯೆಗಳನ್ನು ಗಮನಿಸಿದರೆ ಕೋವಿಡ್-19ಕ್ಕೆ ಅಮೆರಿಕನ್ ಸರಕಾರದ ಪ್ರತಿಕ್ರಿಯೆ ಸಮರ್ಥನೀಯವೇ?. ಕೊರೋನ ವೈರಸ್ ದತ್ತಾಂಶಗಳನ್ನು ಸಂಗ್ರಹಿಸುವ ‘ವರ್ಲ್‌ಡೊಮೀಟರ್ಸ್‌ ಡಾಟ್ ಇನ್‌ಫೊ’ ಪ್ರಕಾರ 40ರ ಹರೆಯದೊಳಗಿನ ಸೋಂಕು ಪೀಡಿತರಲ್ಲಿ ಶೇ.99.8 ಮಂದಿ ಸಂಪೂರ್ಣ ಗುಣಮುಖರಾಗುತ್ತಾರೆ. ಹಾಗೆಯೇ 50ರ ಹರೆಯದ ಕೆಳಗಿನವರಲ್ಲಿ ಶೇ.99.6 ಮಂದಿ ಗುಣಮುಖರಾಗುತ್ತಾರೆ. 80ರ ಹರೆಯದ ಮೇಲ್ಪಟ್ಟವರಲ್ಲಿ ಕೂಡ ಶೇ.85 ಮಂದಿ ಗುಣಮುಖರಾಗುತ್ತಿದ್ದಾರೆ. ಎಲ್ಲ ಸೋಂಕಿತರನ್ನು ಕ್ವಾರಂಟೈನ್‌ಗೆ ಒಳಪಡಿಸಿದ ನಂತರ ಮತ್ತು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮಾಡಿದ ಬಳಿಕ, ಸುರಕ್ಷಿತ ಅಂತರ ಕಾಯ್ದುಕೊಂಡು ಜನಸಾಮಾನ್ಯರಿಗೆ ದೈನಂದಿನ ಚಟುವಟಿಕೆಗಳಿಗೆ ಅವಕಾಶ ನೀಡಬಹುದು. ಸ್ವೀಡನ್, ಬೆಲಾರಸ್, ಥೈವಾನ್, ದಕ್ಷಿಣ ಕೊರಿಯ ಮತ್ತು ಹಾಂಕಾಂಗ್ ತಮ್ಮ ಅರ್ಥವ್ಯವಸ್ಥೆಗಳನ್ನು ನಾಶಪಡಿಸದೆ ಕೋವಿಡ್-19ನ್ನು ಎದುರಿಸಲು ಸಮರ್ಥವಾಗಿವೆ. ಭಾರತ ಆರ್ಥಿಕ ಸ್ವ-ವಿನಾಶವನ್ನು ಕೊನೆಗೊಳಿಸಿ ಈ ದೇಶಗಳಿಂದ ಪಾಠ ಕಲಿಯಬೇಕಾಗಿದೆ.


(ಕೃಪೆ: deccan herald )
(ಲೇಖಕರು ಹೈದರಾಬಾದ್‌ನ ಸೆಂಟರ್ ಫಾರ್ ಇಂಡಿವಿಜುವಲ್ ಲಿಬರ್ಟಿಯ ಸ್ಥಾಪಕ ನಿರ್ದೇಶಕರಾಗಿದ್ದಾರೆ)

share
ನಲಮೋಟು ಚಕ್ರವರ್ತಿ
ನಲಮೋಟು ಚಕ್ರವರ್ತಿ
Next Story
X