ದೇಶದಲ್ಲಿ ಒಂದೇ ದಿನದಲ್ಲಿ 2,411 ಮಂದಿಗೆ ಸೋಂಕು

ಹೊಸದಿಲ್ಲಿ,ಎ.2: ದೇಶದಲ್ಲಿ ಕೊರೋನಾ ಸೋಂಕಿನ ಅಟ್ಟಹಾಸಕ್ಕೆ ಕಡಿವಾಣವೇ ಇಲ್ಲವಾಗಿದ್ದು, ಶನಿವಾರ ಒಂದೇ ದಿನದಲ್ಲಿ 2,411 ಸೋಂಕಿನ ಹೊಸ ಪ್ರಕರಣಗಳು ದೃಢಪಟ್ಟಿವೆ. ಇದು ಈವರೆಗೆ ಒಂದು ದಿನದಲ್ಲಿ ವರದಿಯಾದ ಸೋಂಕಿನ ಪ್ರಕರಣಗಳ ಗರಿಷ್ಠ ಸಂಖ್ಯೆಯಾಗಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ 39,311
ಕ್ಕೇರಿದೆ. ಕಳೆದ 24 ತಾಸುಗಳಲ್ಲಿ 71 ಮಂದಿ ಕೊರೋನಾ ವೈರಸ್‌ನಿಂದ ಸಾವಿಗೀಡಾಗಿದ್ದು, ಸೊೀಂಕಿನಿಂದ ಮೃತರಾದವರ ಸಂಖ್ಯೆ 1,319ಕ್ಕೇರಿದೆ.
Next Story





