ಅಮೆರಿಕ: ಕೊರೋನ ವಿರುದ್ಧ ತುರ್ತು ಬಳಕೆಗೆ ರೆಮ್‌ಡೆಸಿವಿರ್‌ಗೆ ಅಂಗೀಕಾರ

ವಾಶಿಂಗ್ಟನ್, ಮೇ 2: ಕೋವಿಡ್-19 ವಿರುದ್ಧ ಪ್ರಯೋಗ ಹಂತದಲ್ಲಿರುವ ರೆಮ್‌ಡೆಸಿವಿರ್ ಔಷಧದ ತುರ್ತು ಬಳಕೆಗೆ ದೇಶದ ನಿಯಂತ್ರಣ ಸಂಸ್ಥೆಗಳು ಅಂಗೀಕಾರ ನೀಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಘೋಷಿಸಿದ್ದಾರೆ.
ಗಿಲಿಯಡ್ ಸಯನ್ಸಸ್ ಕಂಪೆನಿಯು ಸಿದ್ಧಪಡಿಸಿದ ಔಷಧಿಯು ಕೆಲವು ಕೊರೋನ ವೈರಸ್ ರೋಗಿಗಳ ಚೇತರಿಕೆ ಅವಧಿಯನ್ನು ಕಡಿಮೆಗೊಳಿಸಿದೆ ಎನ್ನುವ ಮಹತ್ವದ ವಿಷಯವು ವೈದ್ಯಕೀಯ ಪರೀಕ್ಷೆಗಳಲ್ಲಿ ಹೊರಬಿದ್ದ ಬಳಿಕ ಅದರ ತುರ್ತು ಬಳಕೆಗೆ ಅಂಗೀಕಾರ ನೀಡಲಾಗಿದೆ. ಸಾಂಕ್ರಾಮಿಕದ ವಿರುದ್ಧ ಯಾವುದೇ ಔಷಧಿಯು ಪರಿಣಾಮಕಾರಿ ಎಂಬುದಾಗಿ ಸಾಬೀತಾಗಿರುವುದು ಇದೇ ಮೊದಲ ಬಾರಿಯಾಗಿದೆ.
ಇದು ನಿಜವಾಗಿಯೂ ಆಶಾದಾಯಕ ಬೆಳವಣಿಗೆಯಾಗಿದೆಎಂದು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗಿಲಿಯಡ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇನಿಯಲ್ ಒಡೇ ಇದ್ದರು.
Next Story





