ಬಿ-ಹ್ಯೂಮನ್ ಮಂಗಳೂರು ವತಿಯಿಂದ ರಮಝಾನ್ ಕಿಟ್ ವಿತರಣೆ

ಮಂಗಳೂರು: ಜಿಲ್ಲೆಯಲ್ಲಿ ಅವಿರತಶ್ರಮ ಮೂಲಕ ತನ್ನ ಕಾರ್ಯಚಟುವಟಿಕೆ ನಡೆಸುತ್ತಿರುವ ಸೇವಾ ಸಂಸ್ಥೆ ಬಿ-ಹ್ಯೂಮನ್ ಇಂದು ಪುತ್ತೂರಿನ ಗ್ರಾಮೀಣ ಪ್ರದೇಶದ ಕೆಲವು ಜಮಾತ್ ಗಳಿಗೆ ತೆರಳಿ ಅಲ್ಲಿನ ಕುಟುಂಬಗಳಿಗೆ ರಮಝಾನ್ ಕಿಟ್ ವಿತರಣೆ ನಡೆಸಿತು.
ಲಾಕ್ ಡೌನ್ ನಿಂದ ಜನರು ಸಂಕಷ್ಟ ಎದುರಿಸುತ್ತಿರುವ ಈ ಸಮಯದಲ್ಲಿ ನಿರಂತರ 40 ದಿನಗಳ ಕಾಲ ತನ್ನ ಸಮಾಜ ಸೇವಾ ಕಾರ್ಯಚಟು ವಟಿಕೆಗಳನ್ನು ನಡೆಸುತ್ತಿರುವ ಬಿ-ಹ್ಯೂಮನ್ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವ ವಲಸೆ ಕಾರ್ಮಿಕರಿಗೆ ಪ್ರತಿದಿನ 450 ಜನರಿಗೆ ಆಹಾರ ಪೊಟ್ಟಣಗಳು ಮತ್ತು ಬೆಳಗ್ಗಿನ ಉಪಹಾರ, ದಿನ ಬಳಕೆಯ ದಿನಸಿ ಕಿಟ್ ವಿತರಣೆ, ಪೌರ ಕಾರ್ಮಿಕರಿಗೆ ಕಿಟ್ ವಿತರಣೆ, ಪ್ರತೀ ತಾಲೂಕುಗಳಲ್ಲಿರುವ ಎಲ್ಲಾ ಜಾತಿ ಧರ್ಮದ ನಿರ್ಗತಿಕರಿಗೆ ಒಟ್ಟು 1375 ಕೋವಿಡ್ ಕಿಟ್ ವಿತರಣೆ, ಲಾಕ್ ಡೌನ್ ನಿಂದ ನಗರ ಪ್ರದೇಶಗಳಲ್ಲಿ ಸಿಲುಕಿ ಸಂಕಷ್ಟದಲ್ಲಿರುವ ವಲಸಿಗ ಉಪವಾಸಿಗರಿಗೆ ಪ್ರತಿದಿನ 400 ಇಫ್ತಾರ್ ಕಿಟ್ ಮತ್ತು ಸಹರಿ ಕಿಟ್ ಸೇರಿ ಕಳೆದ 40 ದಿನಗಳಿಂದ ನಿರಂತರವಾಗಿ ಸೇವಾ ಕಾರ್ಯ ನಡೆಸುತ್ತಿದೆ.
ಇಂದು ಪುತ್ತೂರು ತಾಲೂಕಿನ ತ್ಯಾಗರಾಜೇ ಜಮಾಅತ್ ನ ಎಲ್ಲಾ ಮನೆಗಳಿಗೆ ಒಟ್ಟು 60 ಕಿಟ್ ಮತ್ತು ಪಾಪೆತ್ತಡ್ಕ ಜಮಾಅತ್ ನಲ್ಲಿ ಅರ್ಹ ಕುಟುಂಬಗಳಿಗೆ 25 ರಮಝಾನ್ ಕಿಟ್ ಬಿ-ಹ್ಯೂಮನ್ ತಂಡ ವಿತರಿಸಿತು. ಇತರ ತಾಲೂಕಿನಲ್ಲಿರುವ ನಿರ್ಗತಿಕ ಕುಟುಂಬಗಳಿಗೆ ಇನ್ನಷ್ಟು ಯೋಜನೆಗಳನ್ನು ರೂಪಿಸಲಾಗುವುದೆಂದು ಬಿ. ಹ್ಯೂಮನ್ ಸ್ಥಾಪಕರಾದ ಆಸೀಫ್ ಡೀಲ್ಸ್ ತಿಳಿಸಿದರು.
ಬಿ-ಹ್ಯೂಮನ್ ನ ಅಶ್ರಫ್ ಐನಾ ಗ್ರೂಪ್, ಆಸೀಫ್ ಸೀಕೋ, ಅಲ್ತಾಫ್, ಶುಕೂರ್ ಹಾಜಿ ಕಲ್ಲೇಗ ಹಿದಾಯ(ಎಫ್), ಇಮ್ತಿಯಾಝ್ ಪಾರ್ಲೆ, ಅಹ್ನಫ್ ಡೀಲ್ಸ್ ಈ ಸಂದರ್ಭ ಉಪಸ್ಥಿತರಿದ್ದರು.






.jpeg)
.jpeg)

.jpeg)
.jpeg)


