Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. Thewire.in ಸ್ಥಾಪಕ ಸಂಪಾದಕ ಸಿದ್ಧಾರ್ಥ...

Thewire.in ಸ್ಥಾಪಕ ಸಂಪಾದಕ ಸಿದ್ಧಾರ್ಥ ವರದರಾಜನ್ ಗೆ ಪ್ರತಿಷ್ಠಿತ ಡ್ಯುಶೆ ವೆಲ್ಲೆಸ್ ವಾಕ್ ಸ್ವಾತಂತ್ರ್ಯ ಪುರಸ್ಕಾರ

ದಿಟ್ಟ ವರದಿಗಾರಿಕೆಗಾಗಿ ಜಗತ್ತಿನಾದ್ಯಂತ 17 ಪತ್ರಕರ್ತರಿಗೆ ಪ್ರಶಸ್ತಿ

ವಾರ್ತಾಭಾರತಿವಾರ್ತಾಭಾರತಿ3 May 2020 8:30 PM IST
share
Thewire.in ಸ್ಥಾಪಕ ಸಂಪಾದಕ ಸಿದ್ಧಾರ್ಥ ವರದರಾಜನ್ ಗೆ ಪ್ರತಿಷ್ಠಿತ ಡ್ಯುಶೆ ವೆಲ್ಲೆಸ್ ವಾಕ್ ಸ್ವಾತಂತ್ರ್ಯ ಪುರಸ್ಕಾರ

ಹೊಸದಿಲ್ಲಿ,ಮೇ 3: ಖ್ಯಾತ ಸುದ್ದಿಜಾಲತಾಣ ‘Thewire.in’ನ ಸ್ಥಾಪಕ ಸಂಪಾದಕ ಸಿದ್ಧಾರ್ಥ ವರದರಾಜನ್ ಸೇರಿದಂತೆ 14 ದೇಶಗಳ, 17 ಮಂದಿ ಪತ್ರಕರ್ತರು, ಈ ಸಾಲಿನ ಪ್ರತಿಷ್ಠಿತ ‘ಡ್ಯುಶೆ ವೆಲ್ಲೆಸ್ ವಾಕ್ ಸ್ವಾತಂತ್ರ್ಯ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ವಿಶ್ವ ಪತ್ರಿಕಾ ಸ್ವಾತಂತ್ರ್ಯದ ದಿನವಾದ ರವಿವಾರ ಈ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಈ ಬಾರಿಯ ಪ್ರಶಸ್ತಿಗೆ ಕೊರೋನಾ ವೈರಸ್ ಸೋಂಕಿನ ಕುರಿತ ವರದಿಗಾರಿಕೆಗಾಗಿ ಬಂಧಿತರಾದ, ಬೆದರಿಕೆಗೊಳಗಾದ ಅಥವಾ ಬಂಧಿತರಾದ ಪತ್ರರ್ತರನ್ನು ಆಯ್ಕೆ ಮಾಡಲಾಗಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಲಾಕ್‌ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆಂಬ ವರದಿಯನ್ನು ಪ್ರಕಟಿಸಿದ್ದಕ್ಕಾಗಿ ವರಜರಾಜನ್ ವಿರುದ್ಧ ಉತ್ತರಪ್ರದೇಶ ಪೊಲೀಸರು ಕ್ರಿಮಿನಲ್ ಆರೋಪಗಳನ್ನು ದಾಖಲಿಸಿದ ಸಂದರ್ಭದಲ್ಲೇ ಅವರು ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

2015ರಲ್ಲಿ ‘ಡ್ಯುಶೆ ವೆಲ್ಲೆಸ್’ ಈ ಪ್ರಶಸ್ತಿಯನ್ನು ಆರಂಭಿಸಿತ್ತು. ಮಾಧ್ಯಮಗಳಲ್ಲಿ ಮಾನವ ಹಕ್ಕುಗಳು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾರ ಬದ್ಧತೆಯನ್ನು ಪ್ರದರ್ಶಿಸಿದ ವ್ಯಕ್ತಿಗಳಿಗೆ ಈ ಪುರಸ್ಕಾರವನ್ನು ನೀಡುತ್ತಾ ಬರಲಾಗುತ್ತಿದೆ.

ವರದರಾಜನ್ ಅವರಂತೆ ಈ ಸಲದ ‘ಡ್ಯುಶೆ ವೆಲ್ಲೆಸ್ ವಾಕ್ ಸ್ವಾತಂತ್ರ ಪ್ರಶಸ್ತಿ’ಗೆ ಆಯ್ಕೆಯಾದವರು ಕೊರೋನಾ ವೈರಸ್ ಹಾವಳಿಗೆ ಸಂಬಂಧಿಸಿ ಆಡಳಿತದ ನಿರ್ಲಕ್ಷತೆ, ಭ್ರಷ್ಟಾಚಾರ ಹಾಗೂ ಅಕ್ರಮಗಳನ್ನು ಬಯಲುಗೊಳಿಸಿಸದ್ದಕ್ಕಾಗಿ ತಮ್ಮ ದೇಶಗಳಲ್ಲಿ ವಿವಿಧ ರೀತಿಯ ಕಿರುಕುಳ ಹಾಗೂ ಕಾನೂನುಕ್ರಮಗಳಿಗೆ ಒಳಗಾದವರಾಗಿದ್ದಾರೆ.

ಪ್ರಶಸ್ತಿಗೆ ಪಾತ್ರರಾದ ಇತರರು

ಅನಾ ಲಾಲಿಕ್ (ಸರ್ಬಿಯ), ಬ್ಲಾಝ್‌ಘಾಗಾ (ಸ್ಲೋವೆನಿಯಾ), ಸೆರ್ಗೆಝ್ ಸಾಝುಕ್(ಬೆಲಾರಸ್), ಎಲ್ಲೆನಾ ಮಿಲಾಶಿನಾ (ರಶ್ಯ), ಡ್ರಾವಿನ್ಸನ್ ರೋಜಸ್ (ವೆನಿಝುವೆಲಾ), ಮುಹಮ್ಮದ್ ಮೊಸಾಯೆದ್ (ಇರಾನ್), ಬಿಯಾಟಿಫಿಕ್ ನಿಗುಂಬ್ವಾಡ (ಝಿಂಬಾಬ್ವೆ), ಡೇವಿಡ್ ಮುಸಿಸಿ ಕಾರ್ಯಂಕೊಲೊ (ಉಗಾಂಡ), ನುರ್ಕಾನ್ ಬಾಯ್‌ಸಲ್ (ಟರ್ಕಿ), ಇಸ್ಮೆಟ್ ಸಿಗಿಟ್ (ಟರ್ಕಿ), ಫೇರೆಸ್ ಸಾಯೆಗ್ (ಜೋರ್ಡಾನ್), ಸೊವಾನ್ ರಿಥಿ (ಕಾಂಬೋಡಿಯ), ಮಾರಿಯಾ ವಿಕ್ಟೋರಿಯಾ ಬೆಲ್ಟ್ರಾನ್ (ಫಿಲಿಪಿಪ್ಪೈನ್ಸ್), ಚೆನ್ ಕ್ವಿಶಿ (ಚೀನಾ), ಲಿ ಝೆಹುವಾ ಹಾಗೂ ಫಾಂಗ್ ಬಿನಾ (ಚೀನಾ).

ನಿಗೂಢವಾಗಿ ಕಣ್ಮರೆಯಾದ ವುಹಾನ್ ಪತ್ರಕರ್ತನಿಗೆ ಪ್ರಶಸ್ತಿಯ ಗೌರವ

ಪ್ರಶಸ್ತಿ ವಿಜೇತರಲ್ಲೊಬ್ಬರಾದ ಫಾಂಗ್ ಬಿನ್ ಅವರು ಉದ್ಯಮಿಯಾಗಿದ್ದು, ಆನಂತರ ನಾಗರಿಕ ಪತ್ರಕರ್ತನಾಗಿ ಕಾರ್ಯನಿರ್ವಹಿಸಿದ್ದರು. 2020ರ ಆರಂಭದಲ್ಲಿ ಕೊರೋನಾ ವೈರಸ್ ಹಾವಳಿಯ ಉಗಮಕೇಂದ್ರವಾದ ವುಹಾನ್‌ನಲ್ಲಿ ವರದಿಗಾರಿಕೆಯನ್ನು ಆರಂಭಿಸಿದ್ದರು. ಆಸ್ಪತ್ರೆಯ ಹೊರಗೆ ಹಲವಾರು ಮೃತದೇಹಗಳ ಚೀಲಗಳನ್ನು ಪೇರಿಸಿಟ್ಟ ದೃಶ್ಯಗಳ ವಿಡಿಯೋಗಳನ್ನು ಅವರು ಪ್ರಸಾರ ಮಾಡಿದ್ದರು. ಹಲವಾರು ಸಲ ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಿದ್ದರು ಮತ್ತು ಆನಂತರ ನಿಗೂಢವಾಗಿ ಅವರು ಕಣ್ಮರೆಯಾಗಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X