ಹದಗೆಟ್ಟ ಆರ್ಥಿಕ ಸ್ಥಿತಿ: ಮುಂಬೈನ ಸಿಕೆಪಿ ಬ್ಯಾಂಕಿನ ಪರವಾನಿಗೆ ರದ್ದುಗೊಳಿಸಿದ ಆರ್‌ಬಿಐ

ಮುಂಬೈ,ಮೇ 3: ಇಲ್ಲಿಯ ಸಿಕೆಪಿ ಸಹಕಾರಿ ಬ್ಯಾಂಕಿನ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದ್ದರಿಂದ ತಾನು ಅದರ ಪರವಾನಿಗೆಯನ್ನು ರದ್ದುಗೊಳಿಸಿದ್ದಾಗಿ ಆರ್‌ಬಿಐ ತಿಳಿಸಿದೆ.
ಬ್ಯಾಂಕಿನ ವ್ಯವಹಾರಗಳು ಸಾರ್ವಜನಿಕ ಹಿತಾಸಕ್ತಿಗೆ ಮಾರಕವಾದ ರೀತಿಯಲ್ಲಿ ನಡೆಯುತ್ತಿದ್ದವು ಎಂದಿದೆ. ಪರವಾನಿಗೆ ರದ್ದತಿ ಆದೇಶ ಎ.28ರಂದು ಹೊರಬಿದ್ದಿದ್ದು, ಎ.30ರಿಂದ ಜಾರಿಗೊಂಡಿದೆ.
ಸಿಕೆಪಿ ಬ್ಯಾಂಕ್ ಯಾವುದೇ ಬ್ಯಾಂಕಿಂಗ್ ವ್ಯವಹಾರ ನಡೆಸುವುದನ್ನು ನಿಷೇಧಿಸಲಾಗಿದೆ. ಅದರ ಸಮಾಪನಕ್ಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಲಿಕ್ವಿಡೇಟರ್ ನೇಮಕಗೊಳಿಸುವಂತೆ ಪುಣೆಯ ಸಹಕಾರಿ ಸಂಘಗಳ ರಿಜಿಸ್ಟ್ರಾರ್‌ಗೆ ಸೂಚಿಸಲಾಗಿದೆ ಎಂದು ಶನಿವಾರ ಹೇಳಿಕೆಯಲ್ಲಿ ತಿಳಿಸಿರುವ ಆರ್‌ಬಿಐ, ಬ್ಯಾಂಕು ತನ್ನ ಠೇವಣಿದಾರರ ಹಣವನ್ನು ಮರಳಿಸುವ ಸ್ಥಿತಿಯಲ್ಲಿಲ್ಲ. ವಿಮಾ ಕಾಯ್ದೆಯನ್ವಯ ಠೇವಣಿದಾರರಿಗೆ ಐದು ಲಕ್ಷ ರೂ.ವರೆಗೆ ಮರುಪಾವತಿಯಾಗಲಿದೆ ಎಂದಿದೆ.
2019 ನವೆಂಬರ್‌ಗೆ ಇದ್ದಂತೆ ಬ್ಯಾಂಕು 485.56 ಕೋ.ರೂ.ಗಳ ಠೇವಣಿಗಳು ಮತ್ತು 161.17 ಕೋ.ರೂ.ಗಳ ಸಾಲಗಳನ್ನು ಹೊಂದಿತ್ತು.
Next Story





