ಉಡುಪಿಯಿಂದ ಮತ್ತೆ 1200 ವಲಸೆ ಕಾರ್ಮಿಕರ ಪ್ರಯಾಣ
ಉಡುಪಿ, ಮೇ 3: ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಉಳಿದುಕೊಂಡಿ ರುವ ವಲಸೆ ಕಾರ್ಮಿಕರ ಪೈಕಿ ಸುಮಾರು 1200 ಮಂದಿಯನ್ನು ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ಒಟ್ಟು 40 ಬಸ್‌ಗಳಲ್ಲಿ ಇಂದು ಅವವರ ಊರಿಗೆ ಕಳುಹಿಸಿಕೊಡಲಾಯಿತು.
ಕಾರ್ಕಳ ತಾಲೂಕಿನಿಂದ 10, ಕುಂದಾಪುರ- 4, ಕಾಪು- 8, ಬ್ರಹ್ಮಾವರ- 8, ಹೆಬ್ರಿ- 2, ಉಡುಪಿ ತಾಲೂಕಿನಿಂದ 8 ಬಸ್‌ಗಳಲ್ಲಿ ವಲಸೆ ಕಾರ್ಮಿಕರು ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಅಥಣಿ, ಕುಷ್ಟಗಿ ರೋಣ, ಇಳಕಲ್‌ಗೆ ಪ್ರಯಾಣ ಬೆಳೆಸಿದ್ದಾರೆ. ಒಂದೊಂದು ಬಸ್‌ಗಳಲ್ಲಿ 30 ಮಂದಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ಉಡುಪಿ ಜಿಲ್ಲೆಯಿಂದ ಒಟ್ಟು 90 ಕೆಎಸ್ ಆರ್‌ಟಿಸಿ ಬಸ್‌ಗಳಲ್ಲಿ ಒಂದು ಬಸ್ಸಿನಲ್ಲಿ 30 ಮಂದಿಯಂತೆ ಒಟ್ಟು 2700ಕ್ಕೂ ಅಧಿಕ ಮಂದಿ ವಲಸೆ ಕಾರ್ಮಿಕರು ತಮ್ಮ ಜಿಲ್ಲೆಗಳಿಗೆ ತೆರಳಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಉಡುಪಿ ಡಿಪ್ಪೊ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.
Next Story





