ಹಲವರಿಗೆ ಕೊರೋನ ಸೋಂಕು: ದಿಲ್ಲಿ ಏಮ್ಸ್ ನ 100ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗೆ ಕ್ವಾರಂಟೈನ್

ಹೊಸದಿಲ್ಲಿ: ಇಲ್ಲಿನ ಕೋಟ್ಲಾ ಮುಬಾರಕ್ ಪುರದಲ್ಲಿರುವ ಹಲವು ಭದ್ರತಾ ಸಿಬ್ಬಂದಿ ಕೊರೋನ ಸೋಂಕಿಗೊಳಗಾಗಿರುವುದು ದೃಢಪಟ್ಟ ನಂತರ ಏಮ್ಸ್ ನಲ್ಲಿನ 100ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ದೇಶದ ಅತ್ಯುನ್ನತ ವೈದ್ಯಕೀಯ ಸಂಸ್ಥೆಯಾದ ಏಮ್ಸ್ ನಲ್ಲಿ ಈಗಾಗಲೇ ನರ್ಸ್ ಗಳು, ಆಸ್ಪತ್ರೆ ಪರಿಚಾರಕರು, ಭದ್ರತಾ ಸಿಬ್ಬಂದಿ ಮತ್ತು ಒಬ್ಬರು ವೈದ್ಯರು ಸೇರಿ 22 ಆರೋಗ್ಯ ಕಾರ್ಯಕರ್ತರು ಕೊರೋನ ಸೋಂಕಿಗೆ ಒಳಗಾಗಿದ್ದಾರೆ.
ಈಗಾಗಲೇ 12 ಭದ್ರತಾ ಸಿಬ್ಬಂದಿಗೆ ಕೊರೋನ ದೃಢಪಟ್ಟ ಕಾರಣ ನೂರಕ್ಕೂ ಅಧಿಕ ಸಿಬ್ಬಂದಿಗೆ ಕ್ವಾರಂಟೈನ್ ನಲ್ಲಿರುವಂತೆ ಸೂಚನೆ ನೀಡಲಾಗಿದೆ.
Next Story