ಉಡುಪಿಯ 219 ಪೌರಕಾರ್ಮಿಕರಿಗೆ ಸಹಾಯಧನ, ಅಕ್ಕಿ ವಿತರಣೆ

ಉಡುಪಿ, ಮೇ 4: ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಬ್ರಹ್ಮಕಲ ಶೋತ್ಸವ ಸಮಿತಿಯ ವತಿಯಿಂದ ಲಾಕ್‌ಡೌನ್ ಅವಧಿಯಲ್ಲಿ ಉಡುಪಿ ನಗರ ಸಭೆಯ 35 ವಾರ್ಡ್‌ಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ 219 ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಸೋಮವಾರ ಅಜ್ಜರಕಾಡು ಪುರಭವನದಲ್ಲಿ ಆಯೋಜಿಸಲಾಗಿತ್ತು.
ಕೊರೋನ ಭೀತಿಯಂತಹ ಸಂದಿಗ್ದ ಸಮಯದಲ್ಲಿ ಉಡುಪಿ ಪರಿಸರವನ್ನು ಸ್ವಚ್ಛವಾಗಿರಿಸಿದ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಮೇಲ್ವಿಚಾರ ಕರು ಮತ್ತು ವಾಹನ ಚಾಲಕರಿಗೆ ವಿಶೇಷ ಗೌರವ ಪೂರ್ವಕವಾಗಿ ಒಟ್ಟು 5,47,500 ರೂ ಮೊತ್ತದ ತಲಾ 2000ರೂ. ನಗದು ಮತ್ತು 10ಕೆ.ಜಿ. ಅಕ್ಕಿಯನ್ನು ಈ ಸಂದರ್ಭ ದಲ್ಲಿ ವಿತರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಕೆ.ರಘುಪತಿ ಭಟ್ ಮಾತನಾಡಿ, ಕೊರೋನ ರೋಗದ ಅಪಾಯಕಾರಿ ಪರಿಸ್ಥಿತಿಯಲ್ಲಿ ತಮ್ಮ ಕರ್ತವ್ಯವನ್ನು ಉತ್ತಮ ವಾಗಿ ನಿರ್ವಹಿಸಿದ ಪೌರಕಾರ್ಮಿಕರು ಕೋವಿಡ್ ಸೇನಾನಿಗಳಾಗಿದ್ದಾರೆ. ಉಡುಪಿ ನಗರ ಸ್ವಚ್ಛತೆ ಕಾಪಾಡುವಲ್ಲಿ ಇವರ ಪಾತ್ರ ಪ್ರಮುಖವಾದುದು ಎಂದರು.
ಉಡುಪಿ ಜಿಲ್ಲೆ ಹಸಿರು ವಲಯದ ವ್ಯಾಪ್ತಿಗೆ ಬಂದರೂ ಯಾರು ಕೂಡ ಮೈಮರೆಯಬಾರದು. ಪೌರಕಾರ್ಮಿಕರು ಅಪಾಯಕಾರಿ ಸ್ಥಿತಿಯಲ್ಲಿ ಕೆಲಸ ಮಾಡುವಾಗ ಕಡ್ಡಾಯವಾಗಿ ಮಾಸ್ಕ್, ಕೈಕವಚ, ಶೂಗಳನ್ನು ಧರಿಸಬೇಕು. ಈ ರೋಗಕ್ಕೆ ಮದ್ದು ಕಂಡುಹಿಡಿಯುವವರೆಗೆ ಆತಂಕದ ಸ್ಥಿತಿ ಇರು ತ್ತದೆ ಎಂದು ಅವರು ತಿಳಿಸಿದರು.
ಸಮಿತಿಯ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಕಡಿಯಾಳಿ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ನಗರ ಸಭಾ ಪೌರಾಯುಕ್ತ ಆನಂದ್ ಸಿ.ಕಲ್ಲೋಳಿಕರ್ ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷ ಯಶ್ಪಾಲ್ ಸುವರ್ಣ ಸ್ವಾಗತಿಸಿದರು. ಪರಿಸರ ಅಭಿಯಂತರ ಸ್ನೇಹ ವಂದಿಸಿದರು. ಯತೀಶ್ ಕಾರ್ಯಕ್ರಮ ನಿರೂಪಿಸಿದರು.







