ವಾಹನಗಳಿಗೆ ದಂಡ ವಸೂಲಿ : ಎಸ್‌ಡಿಪಿಐ ಖಂಡನೆ
ಮಂಗಳೂರು, ಮೇ 4: ಲಾಕ್‌ಡೌನ್ ಅವಧಿಯಲ್ಲಿ ವಶಪಡಿಸಿಕೊಂಡಿರುವ ವಾಹನಗಳನ್ನು ಇದೀಗ ಪೊಲೀಸ್ ಇಲಾಖೆ ಬಿಡುಗಡೆ ಮಾಡಲಾ ಗುತ್ತಿದೆಯಾದರೂ ವಾಹನಗಳ ಮೇಲಿನ ಹಿಂದಿನ ಎಲ್ಲಾ ಪ್ರಕರಣಗಳಿಗೆ ಒಟ್ಟಾಗಿ ಸಮಗ್ರ ದಂಡ ವಸೂಲಿ ಮಾಡುತ್ತಿರುವ ಪೊಲೀಸ್ ಇಲಾಖೆಯ ನಡೆಯನ್ನು ಎಸ್‌ಡಿಪಿಐ ರಾಜ್ಯ ಸಮಿತಿ ಖಂಡಿಸಿದೆ.
ಕಳೆದ ಎರಡು ತಿಂಗಳಿನಿಂದ ಜನತೆ ದುಡಿಮೆಯೂ ಇಲ್ಲದೆ ಕೈಯಲ್ಲಿ ಹಣವೂ ಇಲ್ಲದೆ ಕಂಗಾಲಾಗಿರುವ ಈ ಸಂದರ್ಭ ವಶಪಡಿಸಿಕೊಂಡ ವಾಹನಗಳ ಮೇಲಿನ ಎಲ್ಲಾ ಪ್ರಕರಣಗಳನ್ನು ಒಟ್ಟು ಸೇರಿಸಿ ವಾಹನ ಮಾಲಕರಿಂದ ಸಮಗ್ರ ದಂಡ ವಸೂಲಿ ಮಾಡುತ್ತಾ ಜನಸಾಮಾನ್ಯರ ಮೇಲೆ ಹೊರಲಾರದ ಹೊರೆಯನ್ನು ಹೇರುತ್ತಿರುವುದು ಸರಿಯಲ್ಲ ಎಂದು ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





