ಮಾಸ್ಕ್ ಧರಿಸದೆ ಓಡಾಟ: 202 ಮಂದಿಯಿಂದ 89,455 ರೂ. ದಂಡ ವಸೂಲಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 4: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ನಗರದಲ್ಲಿ ಮಾಸ್ಕ್ ಧರಿಸದೆ ಬೈಕ್, ಕಾರ್ ಚಾಲಕರು ಹಾಗೂ ರಸ್ತೆಯಲ್ಲಿ ಓಡಾಡುತ್ತಿದ್ದ 202 ವ್ಯಕ್ತಿಗಳಿಂದ ಸುಮಾರು 89,455 ರೂ.ದಂಡ ವಸೂಲಿ ಮಾಡಲಾಗಿದೆ.
ಬೆಂಗಳೂರು ಪೂರ್ವ ವಿಭಾಗದಲ್ಲಿ 55 ಮಂದಿಯಿಂದ ದಂಡ ವಸೂಲಿ ಮಾಡಲಾಗಿದೆ. ಹಾಗೆಯೇ ಬೆಂಗಳೂರು ಪಶ್ಚಿಮ ವಿಭಾಗದಿಂದ 32 ಮಂದಿ, ಬೆಂಗಳೂರು ದಕ್ಷಿಣ 6, ಮಹದೇವಪುರ-18 ಮಂದಿ, ಆರ್ ಆರ್ ನಗರ- 8, ಯಲಹಂಕ-14, ದಾಸರಹಳ್ಳಿ- 32 ಹಾಗೂ ಬೊಮ್ಮನಹಳ್ಳಿ ವಿಧಾನ ಸಭಾಕ್ಷೇತ್ರದಲ್ಲಿ 37 ಮಂದಿಯಿಂದ ಒಟ್ಟಾರೆ 98,455 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಬಿಬಿಎಂಪಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
Next Story





