ಕೇರಳ: ಒಂದೇ ದಿನ 61 ಮಂದಿ ಗುಣಮುಖ
ಸತತ ಎರಡನೆ ದಿನವೂ ಕೊರೋನ ಸೋಂಕಿನ ಹೊಸ ಪ್ರಕರಣವಿಲ್ಲ

File Photo
ತಿರುವನಂತಪುರ, ಮೇ 3: ಸತತ ಎರಡನೆ ದಿನವೂ ಕೇರಳ ರಾಜ್ಯಾದ್ಯಂತ ಸೋಮವಾರ ಕೊರೋನ ವೈರಸ್ ಸೋಂಕಿನ ಒಂದೇ ಒಂದು ಹೊಸ ಪ್ರಕರಣವೂ ವರದಿಯಾಗಿಲ್ಲ. ಕೇರಳದಲ್ಲಿ ಇಂದು 61 ಮಂದಿ ಕೊರೋನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿದ ಬಿಡುಗಡೆಗೊಂಡಿದ್ದಾರೆ.
ಪ್ರಸಕ್ತ ರಾಜ್ಯಾದ್ಯಂತ ಒಟ್ಟು 34 ಮಂದಿ ಕೊರೋನಾ ಪೀಡಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕನಿಷ್ಠ 21,724 ಮಂದಿ ನಿಗಾವಣೆಯಲ್ಲಿದ್ದು, ಅವರಲ್ಲಿ 372 ಮಂದಿ ವಿವಿಧ ಆಸ್ಪತ್ರೆಗಳಲ್ಲಿದ್ದಾರೆಂದು ಅವರು ಹೇಳಿದ್ದಾರೆ.
ಕೇರಳದಲ್ಲಿ ಈವರೆಗೆ 499 ಮಂದಿಗೆ ಕೊರೋನ ಸೋಂಕು ತಗಲಿದ್ದು, ಮೂರು ವರ್ಷದ ಬಾಲಕಿ ಸೇರಿದಂತೆ ಒಟ್ಟು ಮೂವರು ಮೃತಪಟ್ಟಿದ್ದಾರೆಂದು ಅವರು ಹೇಳಿದರು.
ಆದಾಗ್ಯೂ ವಿವಿಧ ದೇಶಗಳಲ್ಲಿ 80ಕ್ಕೂ ಅಧಿಕ ಕೇರಳೀಯರು ಕೊರೋನಾ ಸೋಂಕಿನಿಂದ ಮೃತಪಟ್ಟಿರುವುದು,ವೇದನೆ ತಂದಿದೆ ಎಂದು ಅವರು ಹೇಳಿದ್ದಾರೆ.
ಪಾಸ್ಗಳಿಗಾಗಿ 28 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದು, ಅವರಲ್ಲಿ 5470 ಮಂದಿಗೆ ಪಾಸ್ಗಳನ್ನು ವಿತರಿಸಲಾಗಿದೆ ಎಂದು ಮುಖ್ಯ ಮಂತ್ರಿ ತಿಳಿಸಿದರು.
ಕಳೆದ ಎರಡು ದಿನಗಳಲ್ಲಿ ಕೇರಳದಿಂದ 13,818 ವಲಸೆ ಕಾರ್ಮಿಕರು, ಅವರಿಗಾಗಿ ವ್ಯವಸ್ಥೆಗೊಳಿಸಲಾಗಿರುವ ವಿಶೇಷ ರೈಲುಗಳಲ್ಲಿ ತಮ್ಮ ರಾಜ್ಯಗಳಿಗೆ







