ಗರಿಷ್ಠ ಕೊರೋನ ಪ್ರಕರಣ ವರದಿಯಾದ 20 ಜಿಲ್ಲೆಗಳಿಗೆ ವಿಶೇಷ ತಂಡ ರಚನೆ

ಹೊಸದಿಲ್ಲಿ, ಎ. 21: ಕೊರೋನ ವೈರಸ್ ಸೋಂಕಿನ ಗರಿಷ್ಠ ಪ್ರಕರಣಗಳು ವರದಿಯಾಗಿರುವ ದೇಶದ್ಯಾಂತದ 20 ಜಿಲ್ಲೆಗಳಲ್ಲಿನ ಕೋವಿಡ್-19 ನಿರ್ವಹಣಾ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಗುರುತಿಸಲು ಸಾರ್ವಜನಿಕ ಆರೋಗ್ಯ ತಂಡಗಳನ್ನು ರಚಿಸುವುದಾಗಿ ಕೇಂದ್ರ ಸರಕಾರ ರವಿವಾರ ಘೋಷಿಸಿದೆ.
ಮಹಾರಾಷ್ಟ್ರದ ಮುಂಬೈ ಹಾಗೂ ಪುಣೆ; ಗುಜರಾತ್‌ನ ಅಹ್ಮದಾಬಾದ್,ಸೂರತ್ ಹಾಗೂ ವಡೋದರ; ಮಧ್ಯಪ್ರದೇಶದ ಇಂದೋರ್ ಹಾಗೂ ಭೋಪಾಲ್; ರಾಜಸ್ಥಾನದ ಜೈಪುರ ಹಾಗೂ ಜೋಧ್‌ಪುರ, ಉತ್ತರಪ್ರದೇಶದ ಅಗ್ರಾ ಹಾಗೂ ಲಕ್ನೋ; ಪಶ್ಚಿಮ ಬಂಗಾಳದ ಕೋಲ್ಕತಾ; ತಮಿಳುನಾಡಿನ ಚೆನ್ನೈ; ಹೈದರಾಬಾದ್‌ನ ತೆಲಂಗಾಣ; ಆಂಧ್ರಪ್ರದೇಶದ ಕರ್ನೂಲ್, ಗುಂಟೂರು ಹಾಗೂ ಕೃಷ್ಣಾ ಮತ್ತು ಆಗ್ನೇಯ ಹಾಗೂ ಕೇಂದ್ರ ದಿಲ್ಲಿ, ಇವು ದೇಶದಲ್ಲಿ ಗರಿಷ್ಠ ಸಂಖ್ಯೆಯ ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗಿರುವ ಜಿಲ್ಲೆಗಳಾಗಿವೆ.
ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ,ಏಮ್ಸ್, ಜವಾಹರಲಾಲ್ ನೆಹರೂ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ಮತ್ತು ಅಖಿಲ ಭಾರತ ನೈರ್ಮಲ್ಯ ಹಾಗೂ ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಜ್ಞರನ್ನು ಈ ತಂಡಗಳು ಒಳಗೊಂಡಿರುವವು ಈ ತಂಡಗಳು ಆರೋಗ್ಯ ಇಲಾಖೆಗಳಿಗೆ ತಮ್ಮ ಅಭಿಪ್ರಾಯಗಳನ್ನು ಹಾಗೂ ಶಿಫಾರಸುಗಳನ್ನು ಸಲ್ಲಿಸಲಿವೆ ಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಜಿಲ್ಲೆಗಳಿರುವ 9 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತದ ಆರೋಗ್ಯ ಸಚಿವಾಲಯದ ಅಧೀನದಲ್ಲಿರು ಪ್ರಾದೇಶಿಕ ನಿರ್ದೇಶಕರು ಈ ತಂಡಗಳ ನಿಯೋಜನೆಯಲ್ಲಿ ರಾಜ್ಯ ಆರೋಗ್ಯ ಅಧಿಕಾರಿಗಳಿಗೆ ನೆರವಾಗಲಿದ್ದಾರೆ.







