ಯುಎಇ, ಮಾಲ್ಡೀವ್ಸ್ನಲ್ಲಿ ಸಂಕಷ್ಟದಲ್ಲಿರುವ ಭಾರತೀಯರ ರಕ್ಷಣೆಗೆ ಮೂರು ಹಡಗು: ರಕ್ಷಣಾ ಸಚಿವಾಲಯ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಕೋವಿಡ್-19 ಸಾಂಕ್ರಾಮಿಕದಿಂದಾಗಿ ಮಾಲ್ಡೀವ್ಸ್ ಮತ್ತು ಯುಎಇನಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆ ತರಲು ಮೂರು ಹಡಗುಗಳನ್ನು ಸೋಮವಾರ ಕಳುಹಿಸಿಕೊಡಲಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಪ್ರಕಟಿಸಿದ್ದಾರೆ.
ಎನ್.ಎಸ್. ಜಲಾಶ್ವ ಹಡಗನ್ನು ಮುಂಬೈ ಕಡಲತೀರದಿಂದ ಮಾಲ್ಡೀವ್ಸ್ಗೆ ಕಳುಹಿಸಲಾಗಿದ್ದು, ಇದರ ಜತೆಗೆ ಐಎನ್ಎಸ್ ಮಗರ್ ಹಡಗನ್ನು ಸೋಮವಾರ ರಾತ್ರಿ ಮಾಲ್ಡೀವ್ಸ್ಗೆ ತಿರುಗಿಸಲಾಗಿದೆ. ಅಂತೆಯೇ ಐಎನ್ಎಸ್ ಶಾರ್ದೂಲ್ ನೌಕೆಯನ್ನು ದುಬೈಗೆ ಕಳುಹಿಸಿ, ಅಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ಕರೆತರಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಈ ಮೂರೂ ಹಡಗುಗಳು ಕೊಚ್ಚಿನ್ಗೆ ಆಗಮಿಸಲಿವೆ. ಐಎನ್ಎಸ್ ಮಗರ್ ಹಾಗೂ ಐಎನ್ಎಸ್ ಶಾರ್ದೂಲ್, ಭಾರತೀಯ ನೌಕಾಪಡೆಯ ದಕ್ಷಿಣ ಕಮಾಂಡ್ನ ಹಡಗುಗಳಾಗಿದ್ದರೆ, ಐಎನ್ಎಸ್ ಜಲಾಶ್ವ ಪೂರ್ವ ನೌಕಾ ಕಮಾಂಡ್ನದ್ದಾಗಿದೆ ಎಂದು ಹೇಳಿದ್ದಾರೆ.
Next Story