ಬಾಗಲಕೋಟೆಯ 13 ಮಂದಿ ಸೇರಿ ರಾಜ್ಯದಲ್ಲಿ ಇಂದು 19 ಮಂದಿಗೆ ಕೊರೋನ ಪಾಸಿಟಿವ್ ದೃಢ
ದ.ಕ. ಜಿಲ್ಲೆಯಲ್ಲಿ ಇಬ್ಬರು ಬಾಲಕಿಯರು ಸಹಿತ 3 ಮಂದಿಗೆ ಸೋಂಕು

ಬೆಂಗಳೂರು : ಬಾಗಲಕೋಟೆಯ 13 ಮಂದಿ ಮತ್ತು ದ.ಕ. ಜಿಲ್ಲೆಯ ಮೂರು ಮಂದಿ ಸೇರಿ ರಾಜ್ಯದಲ್ಲಿ ಇಂದು 19 ಮಂದಿಗೆ ಕೊರೋನ ಪಾಸಿಟಿವ್ ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟನೆ ತಿಳಿಸಿದೆ.
ದ.ಕ. ಜಿಲ್ಲೆಯ ಮಂಗಳೂರು ಮಹಾನಗರ ವ್ಯಾಪ್ತಿಯ ಬೋಳೂರು ಗ್ರಾಮ ನಿವಾಸಿಗಳಾದ 11 ವರ್ಷದ ಬಾಲಕಿ, 36 ವರ್ಷದ ಮಹಿಳೆ ಮತ್ತು ಬಂಟ್ವಾಳ ಪೇಟೆಯ 16 ವರ್ಷದ ಬಾಲಕಿ ಸೇರಿ 3 ಮಂದಿ, ಬಾಗಲಕೋಟೆಯ 13, ಬೆಂಗಳೂರಿನ ಇಬ್ಬರು ಮತ್ತು ಕಲಬುರಗಿಯ ಓರ್ವ ವ್ಯಕ್ತಿಯಲ್ಲಿ ಕೊರೋನ ದೃಢವಾಗಿದೆ. ಇಂದು 14 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟನೆ ತಿಳಿಸಿದೆ.
Next Story





