ಕಿಂಝ್ ಫೌಂಡೇಶನ್ ಅಧ್ಯಕ್ಷ ಅಲ್ತಾಫ್ ಹುಸೈನ್ ಸೇವೆ ಅಭಿನಂದನಾರ್ಹ: ಎಸ್ ವೈ ಎಸ್ ಉಳ್ಳಾಲ
ಮಂಗಳೂರು : ಉಳ್ಳಾಲ ವ್ಯಾಪ್ತಿಯ ಮತ್ತು ಸುತ್ತಮುತ್ತಲ ಊರಿನ ಬಡ ಮತ್ತು ಮಧ್ಯಮ ವರ್ಗದ ಮನೆಗಳಿಗೆ ರೇಷನ್ ಸಾಮಗ್ರಿಗಳನ್ನು ತಲುಪಿಸಿದ ಕಿಂಝ್ ಫೌಂಡೇಶನ್ ಇದರ ಚೇರ್ಮೆನ್ ಅಲ್ತಾಫ್ ಹುಸೈನ್ ಅವರ ಸೇವೆ ಶ್ಲಾಘನೀಯ ಮತ್ತು ಅಭಿನಂದನಾರ್ಹವಾದುದು ಎಂದು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಸಖಾಫಿ ಉಳ್ಳಾಲ ತಿಳಿಸಿದರು.
ರಾಜ್ಯ ಮತ್ತು ಕೇಂದ್ರ ಸರಕಾರಗಳು ಇಂತಹ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ನಡೆಸುವ ಅಲ್ತಾಫ್ ಹುಸೈನ್ ರಂತಹ ವ್ಯಕ್ತಿತ್ವಗಳನ್ನು ಗುರುತಿಸಿ ಸೂಕ್ತ ಪ್ರಶಸ್ತಿಗಳು ನೀಡಿ ಗೌರವಿಸುವಂತಹ ಕೆಲಸಗಳು ಮಾಡಬೇಕು ಎಂದು ಎಸ್ ವೈ ಎಸ್ ಕರ್ನಾಟಕ ರಾಜ್ಯ ಸದಸ್ಯರಾದ ಬಿ.ಜಿ ಹನೀಫ್ ಹಾಜಿ ಉಳ್ಳಾಲ ಆಗ್ರಹಿಸಿದರು.
ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಅಕ್ಕರೆಕೆರೆ, ಸೆಂಟರ್ ಕಾರ್ಯಕ್ರಮ ನಿರ್ವಹಣಾ ಕಾರ್ಯದರ್ಶಿ ಇಲ್ಯಾಸ್ ಕೈಕೋ, ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಅಭಿನಂದನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Next Story





