ಮುಖ್ಯಮಂತ್ರಿಗಳಿಂದ ಪ್ಯಾಕೇಜ್; ಉಡುಪಿ ಜಿಲ್ಲಾ ಬಿಜೆಪಿ ಅಭಿನಂದನೆ
ಉಡುಪಿ, ಮೇ 6: ಕೋವಿಡ್-19ರಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ವಿವಿಧ ವೃತ್ತಿಯವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 1610 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಿರುವುದಕ್ಕೆ ಉಡುಪಿ ಜಿಲ್ಲಾ ಬಿಜೆಪಿ ವಿಶೇಷ ಅಭಿನಂದನೆ ಸಲ್ಲಿಸಿದೆ.
ರಾಜ್ಯದ 60 ಸಾವಿರ ಆಗಸರಿಗೆ, 2.30 ಲಕ್ಷ ಕ್ಷೌರಿಕರಿಗೆ, 7.70 ಲಕ್ಷ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ತಲಾ 5 ಸಾವಿರ ರೂ. ನೆರವು, ಹೂವು ಬೆಳೆದು ನಷ್ಟಕ್ಕೀಡಾದ ಬೆಳೆಗಾರ ರೈತರಿಗೆ 1 ಹೆಕ್ಟೇರ್‌ಗೆ 25 ಸಾವಿರ ಪರಿಹಾರ, 11.80 ಲಕ್ಷ ಕಟ್ಟಡ ಕಾರ್ಮಿಕರಿಗೆ 2 ಸಾವಿರ ರೂ.ಗಳ ಸಹಾಯಧನ, ರಾಜ್ಯದಲ್ಲಿ 15.8 ಲಕ್ಷ ಕಟ್ಟಡ ಕಾರ್ಮಿಕರಿಗೆ ನೆರವು ಘೋಷಣೆ, 54 ಸಾವಿರ ಕೈ ಮಗ್ಗ ನೇಕಾರರಿಗೆ ಪ್ರತೀ ವರ್ಷ 2 ಸಾವಿರ ರೂ. ನೆರವು, ವಲಸೆ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಗೆ ಕ್ರಮ, ನೇಕಾರ್ ಸಮ್ಮಾನ್ ಯೋಜನೆ ಘೋಷಣೆ, ನೇಕಾರರ ಸಾಲ ಮನ್ನಾ ಬಾಕಿ 9 ಕೋಟಿ ರೂ. ಕೂಡಲೇ ಬಿಡುಗಡೆ ಮುಂತಾದ ಯಾವುದೇ ರಾಜ್ಯ ಘೋಷಿಸದಷ್ಟು ದೊಡ್ಡ 1610 ಮೊತ್ತದ ವಿಶೇಷ ಪ್ಯಾಕೇಜ್‌ನ್ನು ಘೋಷಿಸಿದ ಮುಖ್ಯಮಂತ್ರಿಗಳನ್ನು ಜಿಲ್ಲಾ ಬಿಜೆಪಿ ಪರವಾಗಿ ಅಭಿನಂದಿಸುವುದಾಗಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.





