ಮೇ 8: ರಕ್ತದಾನ ಶಿಬಿರ
ಮಂಗಳೂರು, ಮೇ 6: ವಿಶ್ವ ರೆಡ್‌ಕ್ರಾಸ್ ಮತ್ತು ವಿಶ್ವ ಥಾಲಸೇಮಿಯಾ ದಿನದ ಅಂಗವಾಗಿ ನಗರದ ಮೇರಿಹಿಲ್‌ನಲ್ಲಿರುವ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿಯ ಸಹಯೋಗದೊಂದಿಗೆ ಮೇ 8ರಂದು ರಕ್ತದಾನ ಶಿಬಿರ ನಡೆಯಲಿದೆ.
ಜಿಲ್ಲೆಯ ಎಲ್ಲಾ ಕಡೆ ರಕ್ತದ ತೀವ್ರ ಅಭಾವ ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು ಎಂದು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ. ಮುರಲಿ ಮೋಹನ ಚೂಂತಾರು ಮನವಿ ಮಾಡಿದ್ದಾರೆ.
Next Story





