ಕಾರ್ಯಕರ್ತರೇ ನನಗೆ ಶ್ರೀರಕ್ಷೆ: ಸಂಸದೆ ಶೋಭಾ
ಉಡುಪಿ, ಮೇ 6: ನನಗೆ ಪೊಲೀಸ್ ಭದ್ರತೆ ಬೇಡ, ಕಾರ್ಯಕರ್ತರೆ ನನಗೆ ಶ್ರೀರಕ್ಷೆಯಾಗಿದ್ದಾರೆ ಎಂದು ತನಗೆ ವಿದೇಶಗಳಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ನಿನ್ನೆ ಹೇಳಿಕೆ ನೀಡಿದ್ದ ಸಂಸದೆ ಶೋಭಾ ಕರಂದ್ಲಾಜೆ ಇಂದು ತಿಳಿಸಿದ್ದಾರೆ.
ತನಗೆ ಬರುತ್ತಿರುವ ವಿದೇಶಿ ಕರೆಗಳ ಬಗ್ಗೆ ಕುಂದಾಪುರದಲ್ಲಿ ಮಾತನಾಡಿದ ಸಂಸದೆ, ತನಗೆ ಪ್ರತಿ ನಿತ್ಯವೂ ಹಲವು ಬೆದರಿಕೆ ಕರೆ ಬರುತ್ತಿವೆ. ಈ ಬಗ್ಗೆ ತನಿಖೆಯಾಗಲಿ ಎಂದರು. ಬೆದರಿಕೆ ಕರೆಗಳ ಕುರಿತು ಡಿಜಿಐಜಿ ಪ್ರವೀಣ್ ಸೂದ್ ಬಳಿ ಮಾತನಾಡಿದ್ದೇನೆ. ವಿದೇಶದಿಂದ ಕರೆ ಬರುತ್ತಿರುವ ಸಂಖ್ಯೆಯನ್ನು ನೀಡಿದ್ದೇನೆ ಎಂದರು.
ತಾನು ಪಿಎಫ್‌ಐ ಹಾಗೂ ಎಸ್‌ಡಿಪಿಐ ವಿರುದ್ಧ ಮಾತನಾಡಿದಾಗಲೆಲ್ಲಾ ಇಂತಹ ಕರೆಗಳು ಬರುತ್ತವೆ. ಹಿಂದೂ ಯುವಕರ ಹತ್ಯೆಯಾದ ಬಗ್ಗೆ ಮಾತನಾಡಿದಾಗ ಕರೆ ಬರುತ್ತೆ. ಕಳೆದ 2 ವರ್ಷದಿಂದ ಇಂತಹ ಕರೆ ಬರುತ್ತಿರುವ ಬಗ್ಗೆ ಈ ಹಿಂದೆಯೂ ದೂರು ಕೊಟ್ಟಿದ್ದೆ ಎಂದವರು ತಿಳಿಸಿದರು.
Next Story





