ಭಗವಾನ್ ಬುದ್ಧನ ಏಕತೆಯ ಸಂದೇಶ ಇಂದು ಹೆಚ್ಚು ಪ್ರಸ್ತುತ: ಗುಟೆರಸ್

ವಿಶ್ವಸಂಸ್ಥೆ, ಮೇ 6: ಜಗತ್ತು ಇಂದು ಕೋವಿಡ್-19 ಸಾಂಕ್ರಾಮಿಕದ ಸುಳಿಯಲ್ಲಿ ಸಿಲುಕಿರುವಾಗ, ಭಗವಾನ್ ಬುದ್ಧನ ಏಕತೆಯ ಮತ್ತು ಇತರರ ಸೇವೆ ಮಾಡಬೇಕೆನ್ನುವ ಸಂದೇಶವು ಹಿಂದೆಂದಿಗಿಂತಲೂ ಹೆಚ್ಚು ಮಹತ್ವ ಪಡೆದುಕೊಂಡಿದೆ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಬುಧವಾರ ಹೇಳಿದ್ದಾರೆ.
ಮೇ 7ರ ಬುದ್ಧಪೂರ್ಣಿಮೆಯ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ವೈಶಾಖದ ಹುಣ್ಣಿಮೆಯಂದು ಗೌತಮ ಬುದ್ಧ ಜನಿಸಿದರು. ಜ್ಞಾನೋದಯ ಹೊಂದಿದರು ಹಾಗೂ ಇಹಲೋಕ ತ್ಯಜಿಸಿದರು ಎಂಬ ಪ್ರತೀತಿಯಿದೆ.
ಭಗವಾನ್ ಬುದ್ಧನ ಜನನ, ಜ್ಞಾನೋದಯ ಮತ್ತು ಮರಣದ ದಿನವನ್ನು ನಾವು ಸ್ಮರಿಸುವಾಗ, ಅವರ ಬೋಧನೆಗಳಿಂದ ನಾವೆಲ್ಲರೂ ಪ್ರೇರಣೆ ಪಡೆಯಬೇಕು. ಕೋವಿಡ್-19 ಸಾಂಕ್ರಾಮಿಕದಿಂದಾಗಿ ಮಾನವ ಕುಟುಂಬ ಬಳಲುತ್ತಿರುವಾಗ, ಎಲ್ಲ ಜೀವಿಗಳು ಕಾಯಿಲೆಗೆ ಒಳಪಡುವಾಗ ನಾನು ಕೂಡ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂಬ ಭಗವಾನ್ ಬುದ್ಧನ ಈ ಸೂತ್ರವನ್ನು ನಾವೆಲ್ಲರೂ ಜ್ಞಾಪಿಸಿಕೊಳ್ಳಬೇಕು ಎಂದು ಗುಟೆರಸ್ ನುಡಿದರು.
Next Story





