ದ.ಕ., ಉಡುಪಿ ಜಿಲ್ಲೆಗಳನ್ನು ಒಂದು ಘಟಕವಾಗಿ ಪರಿಗಣಿಸಿ ಸಂಚಾರ ವ್ಯವಹಾರಕ್ಕೆ ಅವಕಾಶ ಕಲ್ಪಿಸಲು ಕೆಸಿಸಿಐ ಆಗ್ರಹ
ಮಂಗಳೂರು, ಮೇ 6: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯೆಂದು ಕರೆಸಿಕೊಂಡಿದ್ದು,1997ರಲ್ಲಿ ಕಂದಾಯ ಜಿಲ್ಲೆಯಾಗಿ ವಿಭಜನೆ ಗೊಂಡಿದ್ದರು. ವಾಣಿಜ್ಯ ಚಟುವಟಿಕೆ ಆರ್ಥಿಕ ಚಟುವಟಿಕೆ ಹಾಗೂ ಇನ್ನಿತರ ಜನ ಜೀವನದ ದಿನ ನಿತ್ಯದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಒಂದೆ ಜಿಲ್ಲೆಯಂತೆ ಕಾರ್ಯನಿರ್ವಹಿಸುತ್ತಿತ್ತು. ಆದರೆ ಕೊರೋನ ಸೋಂಕು ಲಾಕ್ ಡೌನ್ ಬಳಿಕ ಎರಡು ಜಿಲ್ಲೆಗಳ ನಡುವಿನ ಜನಸಂಚಾರವನ್ನು ಅಧಿಕಾರಿಗಳು ಪ್ರತ್ಯೇಕ ವಾಗಿ ವಿಂಗಡಿಸಿ ಎರಡು ಜಿಲ್ಲೆಗಳ ನಡುವೆ ಸಂಪರ್ಕ ಇಲ್ಲದಂತೆ ಮಾಡಿದ್ದಾರೆ ಇದರಿಂದ ಅವಿಭಜಿತ ಜಿಲ್ಲೆಯ ಜನರ ದಿನನಿತ್ಯದ ವ್ಯವಹಾರಗಳಿಗೆ ಅಡಚಣೆ ಯಾಗಿದೆ ಈ ಬಗ್ಗೆ ಸರಕಾರ ಗಮನಹರಿಸುವಂತೆ ಕೆನರಾ ವಾಣಿಜ್ಯ ಮತ್ತು ಕೈಗಾರಿಕ ಸಂಘ ಆಗ್ರಹಿಸಿದೆ.
ಅವಿಭಜಿತ ಜಿಲ್ಲೆಗೆ ಏಕೆ ತಾರತಮ್ಯ ? ಕೊರೋನ ಸೊಂಕು ತಡೆಯ ಹಿನ್ನೆಲೆಯ ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಕೋಲಾರ, ಚಿಕ್ಕ ಬಳ್ಳಾಪುರ ಜಿಲ್ಲೆಗಳಿಗೆ ಸಂಬಂಧಿಸಿದ ಜಿಲ್ಲೆಗಳನ್ನು ಒಂದು ಯೂನಿಟ್ ಆಗಿ ಪರಿಗಣಿಸಿ ಆದೇಶ ಮಾಡಿರುವ ( ಆರ್.ಡಿ.158/ಟಿಎನ್ ಆರ್ 2020 ಮೇ3,2020 (ಕ್ಲಾಸ್2(ಅ) ಪ್ರಕಾರ ) ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ವಾಣಿಜ್ಯ ಮತ್ತು ಕೈಗಾರಿಕಾ ಚಟುವಟಿಕೆ ಹಾಗೂ ಜನರ ದಿನನತ್ಯದ ಖಾಸಗಿ ವಾಹನಗಳ ಸಂಚಾರಕ್ಕೆ ಒಂದು ಘಟಕವಾಗಿ ಪರಿಗಣಿಸಬೇಕಾಗಿತ್ತು. ಆದರೆ ಸರಕಾರ ಸರಕಾರ ಈ ಬಗ್ಗೆ ಪ್ರತ್ಯೇಕ ಆದೇಶ ಮಾಡದೆ ಇರುವುದರಿಂದ ಎರಡು ಜಿಲ್ಲೆಗಳಲ್ಲಿ ಸಂಚಾರ ಮಾಡುತ್ತಿದ್ದ ಕಾರ್ಮಿಕರಿಗೆ, ಖಾಸಗಿ ಉದ್ಯಮಿಗಳಿಗೆ ಸಮಸ್ಯೆಯಾಗಿದೆ ಈ ಬಗ್ಗೆ ಸರಕಾರ ತಕ್ಷಣ ಗಮನಹರಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನ್ನು ಒಂದು ಘಟಕವಾಗಿ ಪರಿಗಣಿಸಿ ದೈನಂದಿನ ವ್ಯವಹಾರಗಳಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಐಸಕ್ ವಾಝ್ ಸರಕಾರಕ್ಕೆ ಮನವಿ ಸಲ್ಲಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







