ಬ್ರಹ್ಮಾವರ: ಹಾವು ಕಚ್ಚಿ ಸಾವು
ಉಡುಪಿ, ಮೇ 6: ದನದ ಕೊಟ್ಟಿಗೆಯಲ್ಲಿ ದನಕ್ಕೆ ಹುಲ್ಲು ಹಾಕುತಿದ್ದಾಗ ಯಾವುದೋ ವಿಷದ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಹನೆಹಳ್ಳಿ ಗ್ರಾಮದ ಮೂಡುತೋಟದಿಂದ ವರದಿಯಾಗಿದೆ. ರತ್ನಾ (44) ಮೃತ ಮಹಿಳೆ.
ರತ್ನ ಅವರು ಮೇ 1ರಂದು ಬೆಳಗ್ಗೆ 10:45ಕ್ಕೆ ಕೊಟ್ಟಿಗೆಯಲ್ಲಿದ್ದ ಹುಲ್ಲನ್ನು ದನಕ್ಕೆ ಹಾಕುವಾಗ ವಿಷದ ಹಾವು ಕಚ್ಚಿದ್ದು, ಅವರಿಗೆ ಕುಂಜಾಲಿನ ನಾಟಿವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಆರೋಗ್ಯ ಬಿಗಡಾಯಿಸಿದಾಗ ಮೊದಲು ಬ್ರಹ್ಮಾವರ ಬಳಿಕ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಮೇ 5ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ರತ್ನಾ ಅವರ ಸ್ಥಿತಿ ರಾತ್ರಿ ಮತ್ತೆ ವಿಷಮಿಸಿತು. ಮನೆಗೆ ಬಂದು ಪರೀಕ್ಷಿಸಿದ ವೈದ್ಯಾಧಿಕಾರಿ ರತ್ನ ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಮ ದಾಖಲಿಸಲಾಗಿದೆ.
Next Story





