ಮೈಸೂರು: ಇದುವರೆಗೆ 90 ಕೊರೋನ ಸೋಂಕಿತರ ಪೈಕಿ 83 ಮಂದಿ ಗುಣಮುಖ
ಸೋಂಕು ನಿಯಂತ್ರಣದಲ್ಲಿ ಸಾಂಸ್ಕೃತಿಕ ನಗರಿ

ಸಾಂದರ್ಭಿಕ ಚಿತ್ರ
ಮೈಸೂರು, ಮೇ.6: ರಾಜ್ಯದಲ್ಲಿಯೇ ಅತಿ ಹೆಚ್ಚು ಕೊರೋನ ಸೋಂಕಿತರನ್ನು ಹೊಂದಿದ್ದ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದು ಆತಂಕ ಸೃಷ್ಟಿಸಿದ್ದ ಮೈಸೂರು ಜಿಲ್ಲೆ ಇದೀಗ ರೆಡ್ ಝೋನ್ ಪಟ್ಟ ಕಳಚಿಕೊಳ್ಳುವತ್ತ ದಾಪುಗಾಲು ಹಾಕುತ್ತಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ ಒಂದಂಕಿಗೆ ಇಳಿದಿದೆ.
ಕಳೆದ 6 ದಿನಗಳಿಂದ ಯಾವುದೇ ಕೊರೋನ ಸೋಂಕಿತರು ಕಂಡುಬಂದಿಲ್ಲ. ಬುಧವಾರ ಒಬ್ಬ ಕೊರೋನ ಸೋಂಕಿತ ವ್ಯಕ್ತಿ ಗುಣಮುಖವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರಿಂದ 90 ಮಂದಿ ಸೋಂಕಿತರ ಪೈಕಿ ಇದುವರೆಗೆ 83 ಮಂದಿ ಗುಣಮುಖರಾಗಿದ್ದು, 7 ಸಕ್ರಿಯ ಕೊರೋನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಕೊರೋನ ಸೋಂಕಿತರಿಗೆ ನೂತನ ಕೋವಿಡ್-19 ಜಿಲ್ಲಾಸ್ಪತ್ರೆಯ ಐಸೋಲೇಷನ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Next Story





