ಶಾಸಕರು ನೀಡಿದ ಬಹುತೇಕ ಕಿಟ್‌ಗಳು ಸರಕಾರದ ಕಿಟ್‌ಗಳಲ್ಲ: ಜಗದೀಶ ಶೇಣವ
ಕಿಟ್ ಅವ್ಯವಹಾರ ಆರೋಪಕ್ಕೆ ಪ್ರತಿಕ್ರಿಯೆ

ಮಂಗಳೂರು, ಮೇ 6: ಸಂಸದ ನಳಿನ್ ಅವರು 20,000 ಆಹಾರ ಕಿಟ್, ಶಾಸಕ ವೇದವ್ಯಾಸ್ ಕಾಮತ್ ಅವರು 23,000 ಕಿಟ್, ಉತ್ತರ ಶಾಸಕ ಡಾ. ವೈ.ಭರತ್ ಶೆಟ್ಟಿ 30,000 ಕಿಟ್‌ಗಳನ್ನು ನೀಡಿದ್ದಾರೆ. ಇದರಲ್ಲಿ ಬಹುತೇಕ ಕಿಟ್‌ಗಳು ಸರಕಾರದಿಂದ ಬಂದ ಕಿಟ್ ಅಲ್ಲ; ಬದಲಾಗಿ ಜನಪ್ರತಿನಿಧಿಗಳೇ ನೀಡಿದ ಕಿಟ್ ಆಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ ಶೇಣವ ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಎ.ಸಿ.ವಿನಯ್‌ರಾಜ್ ಅವರು ಸರಕಾರ ಕೊಟ್ಟ ಕಿಟ್ ಅನ್ನು ಬಿಜೆಪಿ ಶಾಸಕರು ನೀಡಿದ ಕಿಟ್ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಒಂದು ಕಾರ್ಪೊರೇಟರ್ ವ್ಯಾಪ್ತಿಗೆ 50ರಿಂದ 75 ಕಿಟ್ ಜಿಲ್ಲಾಡಳಿತದ ವತಿಯಿಂದ ದೊರೆತಿದೆ. ಆದರೆ, ಶಾಸಕರು, ಸಂಸದರು ವೈಯಕ್ತಿಕ ನಿಧಿಯಿಂದಲೇ ಸಾವಿರಗಟ್ಟಲೆ ಕಿಟ್‌ಗಳನ್ನು ನೀಡಿದ್ದಾರೆ. ಮಂಗಳೂರು ಕ್ಷೇತ್ರಕ್ಕೂ ಕಿಟ್ ನೀಡಲಾಗಿದೆ. ಇದು ಅವರ ಸ್ವಂತ ಹಣದಿಂದ ನೀಡಿದ್ದಾಗಿದೆ. ಎಲ್ಲೂ ಕೂಡ ಅವರು ತಮ್ಮ ಹೆಸರನ್ನು ಹಾಕಿಲ್ಲ. ಬದಲಾಗಿ ಪ್ರಧಾನಿ ಮೋದಿ ಹೆಸರನ್ನು ಬರೆಯುವ ಮೂಲಕ ದೊಡ್ಡ ಗುಣವನ್ನು ಪ್ರದರ್ಶಿಸಿದ್ದಾರೆ. ಆದರೆ ಕಾಂಗ್ರೆಸ್ ಅಲ್ಪತನ ಪ್ರದರ್ಶಿಸುತ್ತಿದೆ ಎಂದರು.
ಕಿಟ್‌ಗಳನ್ನು ಒಂದೇ ಏಜೆನ್ಸಿಗೆ ನೀಡಿದ್ದಾರೆ ಎಂದು ಅವರು ಆಕ್ಷೇಪಿಸಿದ್ದಾರೆ. ಆದರೆ, ಸಾಮರ್ಥ್ಯವಿರುವವರು ಎಂಬ ಕಾರಣದಿಂದ ಆ ಏಜೆನ್ಸಿಗೆ ನೀಡಲಾಗಿದೆ. ಕಾಂಗ್ರೆಸ್‌ನ ಮಿಥುನ್ ರೈ ಸೇರಿದಂತೆ ಇತರರು ಕೂಡ ಇದೇ ಏಜೆನ್ಸಿಗೆ ನೀಡಿದ್ದಾರೆ ಎಂಬುದನ್ನು ಅವರು ಅರಿತಿರಬೇಕು ಎಂದರು.





