ಕೋವಿಡ್-19 ಪರೀಕ್ಷಾ ಪ್ರಯೋಗಾಲಯಗಳಿಗೆ ಸರಕಾರದ ವಿಶೇಷ ಸೂಚನೆ
ಬೆಂಗಳೂರು, ಮೇ 6: ಕೋವಿಡ್-19 ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಯೋಗಾಲಯಗಳು ಮೇ 7ರಿಂದ ಅನ್ವಯವಾಗುವಂತೆ ಆರ್‍ಟಿ-ಪಿಸಿಆರ್ ಆ್ಯಪ್ ಮೂಲಕ ಭರ್ತಿ ಮಾಡಿರುವ ಎಸ್‍ಆರ್‍ಎಫ್ ಮಾದರಿಗಳನ್ನಷ್ಟೇ ಸ್ವೀಕರಿಸಬೇಕು. ಆ್ಯಪ್ ಹೊರತುಪಡಿಸಿ ವ್ಯಕ್ತಿಗತವಾಗಿ ಭರ್ತಿ ಮಾಡಿರುವ ಎಸ್‍ಆರ್‍ಎಫ್(ಸ್ಪೈಸ್‍ಮೆನ್ ರೆಫರಲ್ ಫಾರ್ಮ್)ಗಳನ್ನು ಯಾವುದಾದರೂ ಪ್ರಯೋಗಾಲಯ ಸ್ವೀಕರಿಸಿದ್ದು ಕಂಡು ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೀದ್ ಅಖ್ತರ್ ಸುತ್ತೋಲೆ ಹೊರಡಿಸಿದ್ದಾರೆ.
Next Story





