ಮಲ್ಲಿಗೆ ಬೆಳೆಗಾರರಿಗೂ ಪರಿಹಾರ ನೀಡಲು ಮುಖ್ಯಮಂತ್ರಿಗೆ ಆಗ್ರಹ
ಉಡುಪಿ, ಮೇ 7: ಲಾಕ್‌ಡೌನ್ ಪರಿಣಾಮವಾಗಿ ತೊಂದರೆಗೆ ಸಿಲುಕಿ ರುವ ಹಲವಾರು ವರ್ಗದ ಅಸಂಘಟಿತ ವಲಯದ ಕಾರ್ಮಿಕರಿಗೆ ಮತ್ತು ಹೂ ಬೆಳೆಗಾರರಿಗೆ ರಾಜ್ಯ ಸರಕಾರ ನೀಡುವ ನೆರವಿನ ಜೊತೆಗೆ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಲ್ಲಿಗೆ ಹೂ ಬೆಳೆಯುವ ಬೆಳೆಗಾರ ರೈತರಿಗೂ ಪರಿಹಾರ ನೀಡಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆಗ್ರಹಿಸಿದ್ದಾರೆ.
ಮಲ್ಲಿಗೆ ಬೆಳೆಗಾರರು ಕೂಡ ಬಹಳ ವರ್ಷಗಳಿಂದ ಮಲ್ಲಿಗೆ ಕೃಷಿಯನ್ನು ಸಾಂಪ್ರದಾಯಿಕವಾಗಿ ಬಹಳ ಕಷ್ಟಪಟ್ಟು ಬೆಳೆಸುತ್ತಿದ್ದು, ಮಲ್ಲಿಗೆಯನ್ನೇ ತಮ್ಮ ಬದುಕನ್ನಾಗಿಸಿಕೊಂಡಿದ್ದಾರೆ. ಇವರೂ ಕೂಡ ಈ ಬಾರಿ ಸಭೆ ಸಮಾರಂಭ ಗಳಿಲ್ಲದೆ ಬೆಳೆಗೆ ಸರಿಯಾದ ಮಾರುಕಟ್ಟೆ ಇಲ್ಲದೇ ಮತ್ತು ಸೂಕ್ತ ದರ ಸಿಗದೆ ಹೈರಾಣಾಗಿದ್ದಾರೆ.
ಆದುದರಿಂದ ಈ ಕೋವಿಡ್ ಪರಿಹಾರ ನಿಧಿಗೆ ಮಲ್ಲಿಗೆ ಬೆಳೆಗಾರರನ್ನು ಸೇರಿಸಿ ಅವರಿಗೂ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಇ-ಮೇಲ್ ಮೂಲಕ ಮನವಿ ಮಾಡಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





