ಕಸಾಪದ 106ನೇ ಸಂಸ್ಥಾಪನಾ ದಿನಾಚರಣೆ

ಉಡುಪಿ, ಮೇ 7: ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕದ ವತಿಯಿಂದ ಕಸಾಪದ 106ನೇ ಸಂಸ್ಥಾಪನಾ ದಿನವನ್ನು ಮಂಗಳವಾರ ಕಾಪು ಕಲ್ಯಾ ವಿದ್ಯಾಧರ್ ಪುರಾಣಿಕ್‌ರ ನಿವಾಸದಲ್ಲಿ ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ನಿತ್ಯೋತ್ಸವ ಕವಿ, ನಾಡೋಜ ಕೆ.ಎಸ್.ನಿಸಾರ್ ಅಹಮ್ಮದ್ ಅವರಿಗೆ ನುಡಿನಮನ ಸಲ್ಲಿಸ ಲಾಯಿತು.
ಕಸಾಪ ತಾಲೂಕು ಗೌರವ ಕಾರ್ಯದರ್ಶಿ ವಿದ್ಯಾಧರ್ ಪುರಾಣಿಕ್, ಕೋಶಾಧಿಕಾರಿ ಎಸ್.ಎಸ್.ಪ್ರಸಾದ್, ಪ್ರಜ್ಞಾ ಮರ್ಪಳ್ಳಿ, ಸುದಕ್ಷಣೆ, ರೇವತಿ ವಿ.ಪುರಾಣಿಕ್, ರಶ್ಮೀ ಪುರಾಣಿಕ್ ಉಪಸ್ಥಿತರಿದ್ದರು. ಕಾರ್ಯರ್ಶಿ ವಿದ್ಯಾ ಅಮ್ಮಣ್ಣಾಯ ವಂದಿಸಿದರು.
Next Story





