ಭಟ್ಕಳ: 45 ಮಂದಿಯ ಗಂಟಲು ದ್ರವ ಪರೀಕ್ಷೆ ರವಾನೆ

ಭಟ್ಕಳ: ಬೇರೆ ಬೇರೆ ರಾಜ್ಯಗಳಲ್ಲಿರುವ ಭಟ್ಕಳ ತಾಲೂಕಿನ ಸುಮಾರು 45 ಜನರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಹೈದರಾಬಾದ್ ನಿಂದ ಭಟ್ಕಳಕ್ಕೆ ಬಂದಿರುವ 34, ಹಾಗೂ ಗೋವಾ ರಾಜ್ಯದಿಂದ 11 ಜನರ ಸ್ವಾಬ್ ಸಂಗ್ರಹ ಮಾಡಿದ್ದು ಇವರೆಲ್ಲರನ್ನು ಆಯಾಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆ ಮತ್ತಿತರ ಸ್ಥಳಗಳಲ್ಲಿ ಕ್ವಾರೆಂಟೇನ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story





