ಕುರ್ಆನ್ ಪಾರಾಯಣ ಸ್ಪರ್ಧೆ: ಮೂಡುಬಿದಿರೆಯ ಅಲ್ಬಿರ್ರ್ ಸ್ಕೂಲ್ ಸಾಧನೆ

ಫಾತಿಮತ್ ಝಹ್ರಾ, ಅಮ್ರಿನ್ ಶಝಾ, ಅಮ್ರಿನ್ ಶಝಾ
ಮಂಗಳೂರು, ಮೇ 7: ರಮಝಾನ್ ಪ್ರಯುಕ್ತ ಅಲ್ಬಿರ್ರ್ ಪ್ರಿ ಸ್ಕೂಲ್ ವತಿಯಿಂದ ನಡೆಸಲಾದ ವಲಯ ಮಟ್ಟದ ಕುರ್ಆನ್ ಪಾರಾಯಣ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಅಬ್ದುಲ್ ಜಬ್ಬಾರ್ ಉಸ್ತಾದ್ ಮೆಮೋರಿಯಲ್ ಅಲ್ ಬಿರ್ರ್ ಸ್ಕೂಲ್ ನ ಪುಟಾಣಿಗಳು ಮೊದಲ ಎರಡು ಸ್ಥಾನಗಳನ್ನು ಗಿಟ್ಟಿಸಿ ಅಭೂತಪೂರ್ವ ಸಾಧನೆ ಮೆರೆದಿದ್ದಾರೆ.
ಫಾತಿಮತ್ ಝಹ್ರಾ ಪ್ರಥಮ ಮತ್ತು ಅಮ್ರಿನ್ ಶಝಾ ದ್ವಿತೀಯ ಹಾಗು ಒಮಾನ್ ದೇಶದ ಸಲಾಲದ ಅಲ್ ಬಿರ್ರ್ ವಿದ್ಯಾರ್ಥಿ ಮುಹಮ್ಮದ್ ರಿಹಾನ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಲಯ ಮಟ್ಟದ ಸ್ಪರ್ಧೆಯಲ್ಲಿ ದ.ಕ. ಜಿಲ್ಲೆಯ ನಾಲ್ಕು ಶಾಲೆಗಳ ಸಹಿತ ಒಮಾನ್ನ ಸಲಾಲ ಹಾಗೂ ತ್ರಿಶೂರು ಜಿಲ್ಲೆಗಳ 11 ಶಾಲೆಯ ಪುಟಾಣಿಗಳು ಪಾಲ್ಗೊಂಡಿದ್ದರು. ಆನ್ಲೈನ್ ಮೂಲಕ ನಡೆದ ಸ್ಪರ್ಧೆಯ ಫಲಿತಾಂಶವನ್ನು ಕೇರಳದ ಅಲ್ ಬಿರ್ರ್ ಕೋರ್ಡಿನೇಟರ್ ಇಸ್ಮಾಯೀಲ್ ಮುಜದ್ದಿದಿ ಘೋಷಿಸಿದರು ಎಂದು ಕರ್ನಾಟಕ ಅಲ್ ಬಿರ್ರ್ ಕೋರ್ಡಿನೇಟರ್ ಅಕ್ಬರ್ ಅಲಿ ಅಡ್ಡೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





