ಶಿರೂರು ಚೆಕ್‌ಪೋಸ್ಟ್‌ನಲ್ಲಿ ಬಿಗು ತಪಾಸಣೆ
ಉಡುಪಿ, ಮೇ 7: ಉತ್ತರ ಕನ್ನಡದ ಭಟ್ಕಳದಲ್ಲಿ ಮತ್ತೆ ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವುದರಿಂದ ಉಡುಪಿ ಜಿಲ್ಲಾ ಗಡಿ ಪ್ರದೇಶವಾಗಿರುವ ಶಿರೂರಿನ ಚೆಕ್‌ಪೋಸ್ಟ್‌ನಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗುಗೊಳಿಸಲಾಗಿದೆ. ಜಿಲ್ಲೆಯ ಒಳಗೆ ಪ್ರವೇಶಿಸುವ ಪ್ರತಿಯೊಂದು ವಾಹನ ಹಾಗೂ ಅದರಲ್ಲಿರುವವ ಸಂಪೂರ್ಣ ಕೂಲಂಕಷ ತನಿಖೆ ನಡೆಸಿ, ಅವರ ಎಲ್ಲಾ ಮಾಹಿತಿಗಳನ್ನು ಲಿಖಿತವಾಗಿ ದಾಖಲಿಸಿ ಒಳಗೆ ಬಿಡಲಾಗುತ್ತಿದೆ.
ಅಲ್ಲದೇ ಉಡುಪಿ ಮೂಲಕ ಮಂಗಳೂರಿನತ್ತ ಪ್ರಯಾಣಿಸುವ ಪ್ರತಿಯೊಂದು ವಾಹನಗಳಿಗೂ ವಿಶೇಷ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಶಿರೂರು ಗಡಿಯಿಂದ ದಕ್ಷಿಣದ ಹೆಜಮಾಡಿ ಗಡಿಭಾಗದವರೆಗೆ ಪೊಲೀಸರು ವಾಹನವೊಂದರಲ್ಲಿ ಇವರನ್ನು ಗಡಿ ದಾಟಿಸುತ್ತಿದ್ದಾರೆ.
ಉಡುಪಿ ಜಿಲ್ಲೆ ಹಸಿರು ವಲಯದಲ್ಲಿರುವ ಕಾರಣ ಗಡಿಯಿಂದ ಗಡಿಗೆ ನೇರವಾಗಿ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಜಿಲ್ಲೆಯಲ್ಲಿರುವ ಎಲ್ಲಾ ಚೆಕ್‌ಫೋಸ್ಟ್ ಹಾಗೂ ಟೋಲ್‌ಗೇಟ್‌ಗಳಲ್ಲೂ ತಪಾಸಣಾಧಿಕಾರಿಗಳು ಹೈ ಅಲರ್ಟ್‌ನಲ್ಲಿದ್ದು, ಯಾರೂ ಅಕ್ರಮವಾಗಿ ನುಸುಳದಂತೆ ಕಟ್ಟೆಚ್ಚರ ವಹಿಸಿದ್ದಾರೆ.





