Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅವನತಿಯೆಡೆಗೆ ಹಳ್ಳಿಗಳು ಮತ್ತು ಪಟ್ಟಣಗಳು...

ಅವನತಿಯೆಡೆಗೆ ಹಳ್ಳಿಗಳು ಮತ್ತು ಪಟ್ಟಣಗಳು !

ಡಾ.ಎಂ.ವೆಂಕಟಸ್ವಾಮಿಡಾ.ಎಂ.ವೆಂಕಟಸ್ವಾಮಿ7 May 2020 11:04 PM IST
share
ಅವನತಿಯೆಡೆಗೆ ಹಳ್ಳಿಗಳು ಮತ್ತು ಪಟ್ಟಣಗಳು !

ವಲಸಿಗರು ಈಗ ಹಳ್ಳಿಗಳಿಗೆ ಹೋದರೂ ಅಲ್ಲಿ ಅವರಿಗೆ ಯಾವುದೇ ಕೆಲಸಗಳು ದೊರಕುವುದಿಲ್ಲ. ಜೊತೆಗೆ ಕೊರೋನ ಸೃಷ್ಟಿಸಿರುವ ಭೀತಿಯಿಂದ ಹಳ್ಳಿಗಳ ಜನರು ಇವರನ್ನು ಹಳ್ಳಿಗಳ ಒಳಕ್ಕೆ ಬಿಟ್ಟುಕೊಳ್ಳುವುದೂ ಇಲ್ಲ. ಕೇಂದ್ರ ಸರಕಾರ ಲಾಕ್‌ಡೌನ್ ಘೋಷಿಸುವುದಕ್ಕೆ ಮೂರುನಾಲ್ಕು ದಿನಗಳ ಮುಂಚೆ ಹಳ್ಳಿಗಳ ಕಡೆಗೆ ಮತ್ತು ಬೇರೆ ದೇಶಗಳಿಗೆ ಹೋಗುವವರು, ಬರುವವರು ಬಂದುಬಿಡಿ. ಇಂತಹ ದಿನದಿಂದ ದೇಶದಲ್ಲಿ ಲಾಕ್‌ಡೌನ್ ಮಾಡಲಾಗುತ್ತದೆ ಎಂದು ಒಂದು ಸೂಚನೆ ಕೊಟ್ಟಿದ್ದರೆ ಇಷ್ಟೊಂದು ಅವಾಂತರಗಳು ನಡೆಯುತ್ತಿರಲಿಲ್ಲ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಇಷ್ಟರ ಮಟ್ಟಿಗೆ ದಿವಾಳಿತನಕ್ಕೆ ಕುಸಿಯುತ್ತಿರಲಿಲ್ಲ. ಈಗ ರಾಜ್ಯ ಸರಕಾರಗಳ ಪರಿಸ್ಥಿತಿ ಕೂಲಿ ಕಾರ್ಮಿಕರಂತೆ ಕೈ ಬಾಯಿಗೆ ಬಂದಿರುವುದು ಎಂತಹ ವಿಪರ್ಯಾಸ ನೋಡಿ!


ಕ್ರಿ.ಶ. 1936ರಲ್ಲಿ ವಾರ್ಧಾದಲ್ಲಿ ಮಹಾತ್ಮಾ ಗಾಂಧೀಜಿ ಅವರು ಸೇವಾಗ್ರಾಮ್ ಸ್ಥಾಪನೆ ಮಾಡಿದಾಗ, ‘‘ನಾನು ಇಲ್ಲಿಗೆ ಬಂದು ನೆಲೆಸುತ್ತಿರುವುದು ನನ್ನ ಸ್ವಯಂ ಸೇವೆ ನಾನೇ ಮಾಡಿಕೊಳ್ಳಲು. ಹಳ್ಳಿಯ ಸೇವೆ ಮಾಡುವುದೆಂದರೆ ನನ್ನಲ್ಲಿ ನಾನು ದೇವರನ್ನು ಕಂಡುಕೊಳ್ಳುವುದು. ಭಾರತದಲ್ಲಿ ಅಸ್ಪಶ್ಯತೆ ಮುಂದುವರಿದರೆ ಹಿಂದೂ ಧರ್ಮಕ್ಕೆ ಉಳಿಗಾಲವಿಲ್ಲ. ಹಳ್ಳಿಗಳು ಉಳಿಯುವುದಿಲ್ಲ. ಕೊನೆಗೆ ಭಾರತವೇ ಇರುವುದಿಲ್ಲ. ಹಳ್ಳಿಯ ಗುಡಿಗಾರಿಕೆ ಉಳಿಯಬೇಕು. ಹಳ್ಳಿಗಳು ಸ್ವಯಂ ತಮ್ಮ ಕಾಲುಗಳ ಮೇಲೆ ತಾವು ನಿಲ್ಲಬೇಕು’’ ಎಂದಿದ್ದರು. ಮಾರ್ಚ್ 24ರಂದು ನಮ್ಮ ಪ್ರಧಾನಮಂತ್ರಿ ಕೊರೋನ ಸೋಂಕು ರೋಗದ ಪ್ರಯುಕ್ತ ರಾತ್ರೋರಾತ್ರಿ ದೇಶದಲ್ಲಿ ಲಾಕ್‌ಡೌನ್ ಘೋಷಿಸಿಬಿಟ್ಟರು. ಇಡೀ ದೇಶ ರಾತ್ರೋರಾತ್ರಿ ಮನೆಗಳ ಒಳಗೆ ಲಾಕ್‌ಡೌನ್ ಆಗಿಬಿಟ್ಟಿತು. ಆದರೆ ನಗರಗಳಲ್ಲಿ ಕೂಲಿನಾಲಿ ಮಾಡಿಕೊಂಡು ಬದುಕುತ್ತಿದ್ದ ಕೋಟ್ಯಂತರ ಗ್ರಾಮೀಣ ಭಾಗಗಳ ಜನರು ನಗರಗಳ ಬೀದಿಗಳಲ್ಲಿ ಸಿಕ್ಕಿಕೊಂಡುಬಿಟ್ಟರು. ಒಂದೇ ರಾತ್ರಿಯಲ್ಲಿ ಇವರು ಎಲ್ಲಾ ರೀತಿಯಲ್ಲೂ ಅನಾಥರಾಗಿಬಿಟ್ಟಿದ್ದರು. ಇವರೆಲ್ಲರೂ ದಿಢೀರನೆ ಕೆಲಸ ಕಳೆದುಕೊಳ್ಳುವುದರ ಜೊತೆಗೆ ಅವರು ಉಳಿದುಕೊಂಡಿದ್ದ ಶೆಡ್ಡುಗಳಿಂದಲೂ ಇವರನ್ನು ಹೊರಕ್ಕೆ ನೂಕಲಾಯಿತು. ಊರುಗಳ ಕಡೆಗೆ ಹೋಗಲು ಬಸ್ಸು, ರೈಲು, ಯಾವುದೇ ವ್ಯವಸ್ಥೆ ಇಲ್ಲದೆ ಇದ್ದ ಕಡೆಯೇ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಾಯಿತು. ದೊಡ್ಡವರು, ಮಕ್ಕಳು ಹೆಣ್ಣುಮಕ್ಕಳು ಎಲ್ಲರೂ ಬೀದಿಗಳಲ್ಲಿ ಅನಾಥರಂತೆ ಸರಕಾರ, ಖಾಸಗಿ ಸಂಸ್ಥೆಗಳು ಮತ್ತು ಉಳ್ಳವರು ಕೊಡುವ ತುತ್ತಿಗಾಗಿ ಕೈ ಕಟ್ಟಿ ಕುಳಿತುಕೊಳ್ಳಬೇಕಾಯಿತು. ಇವರಿಗೆ ಬೇರೆ ದಾರಿ ಇರಲಿಲ್ಲ.

ನೀರು, ಆಹಾರ ಕೊಂಡುಕೊಳ್ಳಲು ಸಹ ಇವರ ಕೈಯಲ್ಲಿ ಹಣ ಇರಲಿಲ್ಲ. ಹಳ್ಳಿಗಳ ಕಡೆಗೆ ನಡೆದುಕೊಂಡು ಹೋಗುವವರನ್ನು ಪೊಲೀಸರು ಹೊಡೆದು ಜಜ್ಜತೊಡಗಿದರು. ಸಣ್ಣಪುಟ್ಟ ವ್ಯಾಪಾರ ಮಾಡಲು ಬೀದಿಗೆ ಬಂದವರನ್ನು ಬೆತ್ತಗಳಲ್ಲಿ ಹೊಡೆದು ಅವರ ತರಕಾರಿ ಇತರ ವಸ್ತುಗಳನ್ನ್ನು ನೆಲಕ್ಕೆ ಚೆಲ್ಲಿ ನಾಶಮಾಡಿದರು. ಎಲ್ಲರೂ ಅಲ್ಲಲ್ಲೇ ಇರಿ ನಿಮಗೆ ಎಲ್ಲಾ ವ್ಯವಸ್ಥೆಯನ್ನು ನಾವು ಮಾಡುತ್ತೇವೆ ಎಂದ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ತಾವು ಮಾಡಿದ್ದು ತಪ್ಪು ಎಂಬ ಅರಿವು ಬರುವುದಕ್ಕೆ ಎಪ್ರಿಲ್ ತಿಂಗಳ ಕೊನೆಯವರೆಗೂ ಕಾಯಬೇಕಾಯಿತು. ಈಗ ನಗರಗಳಲ್ಲಿ ಉಳಿದುಕೊಂಡಿರುವ ವಲಸಿಗ ಕಾರ್ಮಿಕರಿಗೆ ಕನಿಷ್ಠ ಆಹಾರ, ನೀರು ಪೂರೈಸುವುದು ಸಾಧ್ಯವಾಗದ ಮಾತೆಂದು ತಿಳಿದುಕೊಂಡ ಸರಕಾರಗಳು ಎಲ್ಲರನ್ನೂ ಅವರವ ಊರುಗಳ ಕಡೆಗೆ ಸಾಗಹಾಕಲು ಯೋಜನೆಗಳನ್ನು ರೂಪಿಸಿದವು. ಅರ್ಥವಾಗದ ವಿಷಯವೆಂದರೆ ಲಾಕ್‌ಡೌನ್ ವಿಸ್ತರಣೆ ಬಳಿಕ ವಲಸಿಗರನ್ನು ಅವರ ಊರುಗಳ ಕಡೆಗೆ ಹೋಗಲು ಅವಕಾಶ ಮಾಡಿರುವುದು! ಅವರೇ ಹಳ್ಳಿಗಳ ಕಡೆಗೆ ಹೊರಟಾಗ ಬಿಡದೇ ಅಡ್ಡಗಟ್ಟಿ ಈಗ ನೀವೇ ಟಿಕೆಟ್ ಖರೀದಿಸಿ ಎಂದು ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಡವರಿಗೆ ಮತ್ತೊಂದು ಬರೆ ಹಾಕಿದವು.

ರಾಜ್ಯದಾದ್ಯಂತ ಇದಕ್ಕೆ ಭಾರೀ ವಿರೋಧ ವ್ಯಕ್ತವಾದ ಮೇಲೆ ಮೂರುದಿನಗಳ ಕಾಲ ವಲಸಿಗರನ್ನು ಉಚಿತವಾಗಿ ಅವರವರ ಊರುಗಳಿಗೆ ಕಳುಹಿಸಿದವು. ವಲಸಿಗರು ಈಗ ಹಳ್ಳಿಗಳಿಗೆ ಹೋದರೂ ಅಲ್ಲಿ ಅವರಿಗೆ ಯಾವುದೇ ಕೆಲಸಗಳು ದೊರಕುವುದಿಲ್ಲ. ಜೊತೆಗೆ ಕೊರೋನ ಸೃಷ್ಟಿಸಿರುವ ಭೀತಿಯಿಂದ ಹಳ್ಳಿಗಳ ಜನರು ಇವರನ್ನು ಹಳ್ಳಿಗಳ ಒಳಕ್ಕೆ ಬಿಟ್ಟುಕೊಳ್ಳುವುದೂ ಇಲ್ಲ. ಕೇಂದ್ರ ಸರಕಾರ ಲಾಕ್‌ಡೌನ್ ಘೋಷಿಸುವುದಕ್ಕೆ ಮೂರುನಾಲ್ಕು ದಿನಗಳ ಮುಂಚೆ ಹಳ್ಳಿಗಳ ಕಡೆಗೆ ಮತ್ತು ಬೇರೆ ದೇಶಗಳಿಗೆ ಹೋಗವವರು, ಬರುವವರು ಬಂದುಬಿಡಿ. ಇಂತಹ ದಿನದಿಂದ ದೇಶದಲ್ಲಿ ಲಾಕ್‌ಡೌನ್ ಮಾಡಲಾಗುತ್ತದೆ ಎಂದು ಒಂದು ಸೂಚನೆ ಕೊಟ್ಟಿದ್ದರೆ ಇಷ್ಟೊಂದು ಅವಾಂತರಗಳು ನಡೆಯುತ್ತಿರಲಿಲ್ಲ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಇಷ್ಟರ ಮಟ್ಟಿಗೆ ದಿವಾಳಿತನಕ್ಕೆ ಕುಸಿಯುತ್ತಿರಲಿಲ್ಲ.

ಈಗ ರಾಜ್ಯ ಸರಕಾರಗಳ ಪರಿಸ್ಥಿತಿ ಕೂಲಿ ಕಾರ್ಮಿಕರಂತೆ ಕೈ ಬಾಯಿಗೆ ಬಂದಿರುವುದು ಎಂತಹ ವಿಪರ್ಯಾಸ ನೋಡಿ! ಆ ಕಡೆ ಹಳ್ಳಿಗಳು ಈ ಕಡೆ ಪಟ್ಟಣಗಳು ಹಾಳಾಗಿಹೋಗಿವೆ. ಪಟ್ಟಣಗಳು ಕೈಗಾರೀಕರಣ, ಜಾಗತೀಕರಣ ಮತ್ತು ಆಧುನಿಕತೆಯಿಂದ ಮಾಲಿನ್ಯದ ಕೂಪಗಳಾಗಿ ಮಾರ್ಪಟ್ಟಿವೆ. ಭಾರತದ ಪಟ್ಟಣಗಳ ಬೆಳವಣಿಗೆಗೆ ಯಾವುದೇ ಒಂದು ರೂಪುರೇಷೆ-ಯೋಜನೆಗಳಿಲ್ಲ. ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳು ಮಾಡಿದ್ದೇ ಕಾನೂನುಗಳು. ಬಡವರು ಮತ್ತು ಮಧ್ಯಮ ವರ್ಗದ ಜನರು ಬ್ಯಾಂಕ್‌ಗಳಲ್ಲಿ ಕೂಡಿಟ್ಟ ಪೈಸೆಪೈಸೆಗಳನ್ನು ಬಹುಮಿಲಿಯ ವ್ಯಾಪಾರಿಗಳು ಲಕ್ಷಲಕ್ಷ ಕೋಟಿಗಳಲ್ಲಿ ಕ್ಷಣಗಳಲ್ಲಿ ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ಹೋಗುತ್ತಾರೆ. ಅವರು ದೋಚಿಕೊಂಡು ಹೋದ ಹಣವನ್ನು ಸರಕಾರ ಒಂದೇ ಘಳಿಗೆಯಲ್ಲಿ ಸುಮ್ಮನೆ ‘‘ರೈಟ್ ಆಫ್’’ ಎಂದು ಘೋಷಿಸಿ ಬಿಡುತ್ತದೆ. ಈಗ ಸರಕಾರ ಹೇಳಿದ್ದೇ ಕೊನೆಯ ತೀರ್ಪಾಗಿದೆ. ಒಟ್ಟಿನಲ್ಲಿ ಹಣವಂತರೆಲ್ಲ ಮಹಾನಗರಗಳಲ್ಲಿ, ವಿಧಾನಸೌಧಗಳಲ್ಲಿ ಸೇರಿಕೊಂಡು ದೇಶ ನಡೆಸುತ್ತಿದ್ದಾರೆ.

ಇನ್ನು ಹಳ್ಳಿಗಳ ಕಡೆಗೆ ಬಂದರೆ ಹಳ್ಳಿಗಳು ರಾಜಕಾರಣ, ಜಾತಿ ಅಸ್ಪಶ್ಯತೆ ಮತ್ತು ಬಡತನದಿಂದ ನಲುಗಿಹೋಗಿವೆ. ರೈತರು ಕಷ್ಟಪಟ್ಟು ಸಾಲ ಮಾಡಿಕೊಂಡು ಅಷ್ಟೊ ಇಷ್ಟೊ ಬೆಳೆದರೆ ಅದಕ್ಕೆ ನ್ಯಾಯವಾದ ಬೆಲೆ ದೊರಕದೇ ಹೈರಾಣಾಗಿ ಹೋಗುತ್ತಿದ್ದಾರೆ. ಬೆಲೆ ಸಿಕ್ಕರೂ ಮಧ್ಯವರ್ತಿಗಳು ಆ ಕಡೆ ರೈತರನ್ನು ಈ ಕಡೆ ಕೊಳ್ಳುವವರನ್ನೂ ಮುಕ್ಕಿ ತಿಂದುಬಿಡುತ್ತಾರೆ. ಜೊತೆಗೆ ಇದು ಸಾಲದೆಂಬಂತೆ ಅಕಾಲಿಕವಾಗಿ ಬರುವ ಬಿರುಗಾಳಿ ಆಲಿಕಲ್ಲು-ಮಳೆಯಿಂದ ಕೈಗೆ ಬಂದ ಬೆಳೆ ಬಾಯಿಗೆ ಬರದೇ ನಾಶವಾಗಿ ಹೋಗುತ್ತದೆ. ಬಹಳ ಮಜವಾದ ವಿಷಯವೆಂದರೆ ರೈತರ ಬೆಳೆಗಳಿಗೆ ವಿಮೆ ಹಣ ತುಂಬಿಸಿಕೊಳ್ಳವ ಖಾಸಗಿ ಕಂಪೆನಿಗಳು ಅತ್ತ ರೈತರಿಂದಲೂ, ಸರಕಾರಗಳಿಂದಲೂ ಹಣ ಲಪಟಾಯಿಸುತ್ತಿವೆ. ನೂರಾರು ಕೋಟಿ ರೂ.ಗಳನ್ನು ದೋಚುವವರು ಕಾರುಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದರೆ ಜುಜುಬಿ ಎರಡು ಮೂರು ಲಕ್ಷ ರೂ. ಸಾಲ ಮಾಡಿಕೊಂಡ ರೈತರು ನೇಣು ಹಾಕಿಕೊಂಡು ಸಾಯುತ್ತಿದ್ದಾರೆ.

ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರಗಳನ್ನು ಸರಕಾರಗಳು ತೆಗೆದುಕೊಳ್ಳದೇ ಹೋದರೆ ಸಮಸ್ಯೆಗಳು ಏನೆಲ್ಲ ರೂಪ ಪಡೆದುಕೊಳ್ಳುತ್ತವೆ ಎನ್ನುವು ಫಲಿತಾಂಶಗಳನ್ನು ಈಗ ನೋಡುತ್ತಿದ್ದೇವೆ. ಇದು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ನಾಯಕರಿಗೆ ದೊಡ್ಡ ಪಾಠ. ಆದರೆ ಈ ಪಾಠದಿಂದ ಇವರು ಏನಾದರೂ ಕಲಿತುಕೊಂಡರೇ ಎನ್ನುವುವ ಮಾತ್ರ ಗೊತ್ತಿಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ ಎಲ್ಲಾ ರೀತಿಯಲ್ಲೂ ನಿರಂತರವಾಗಿ ಬಡವರೇ ತೊಂದರೆಗೆ ಒಳಗಾಗುವುದು ಯಾಕ್ಕೆ ಎನ್ನುವುದು ಸ್ವಲ್ಪ ಮಟ್ಟಿಗೆ ನಿಮಗೆ ಅರ್ಥವಾಗಿರಬೇಕು!

share
ಡಾ.ಎಂ.ವೆಂಕಟಸ್ವಾಮಿ
ಡಾ.ಎಂ.ವೆಂಕಟಸ್ವಾಮಿ
Next Story
X