ಆಗ್ರಾ: ಕೋವಿಡ್-19ಗೆ ಪತ್ರಕರ್ತ ಬಲಿ
ಆಗ್ರಾ, ಮೇ 8:ಕೋವಿಡ್-19 ವೈರಸ್ನಿಂದ ಸೋಂಕಿತರಾಗಿ ಎಸ್ಎನ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಾಗಿದ್ದ ಪತ್ರಕರ್ತರೊಬ್ಬರು ಮೃತಪಟ್ಟಿರುವುದಾಗಿ ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಭು ಎನ್.ಸಿಂಗ್ ತಿಳಿಸಿದ್ದಾರೆ.
ಕೋವಿಡ್-19 ಸೋಂಕು ತಗಲಿದ್ದ ಪತ್ರಕರ್ತರೊಬ್ಬರನ್ನು ಎಸ್ಎನ್ ವೈದ್ಯಕೀಯ ಕಾಲೇಜಿನ ಐಸೋಲೇಶನ್ ವಾರ್ಡ್ನಲ್ಲಿ ದಾಖಲಿಸಲಾಗಿತ್ತು. ಬುಧವಾರದಿಂದ ಅವರು ವೆಂಟಿಲೇಟರ್ನಲ್ಲಿದ್ದರು ಎಂದು ಸಿಂಗ್ ಹೇಳಿದ್ದಾರೆ.
ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ ದೇಶದಲ್ಲಿ ಒಟ್ಟು ಕೊರೋನ ಸೋಂಕಿತ ಪ್ರಕರಣಗಳ ಸಂಖ್ಯೆ 52,952ಕ್ಕೆ ತಲುಪಿದೆ. ಈ ಪೈಕಿ 15,267 ಮಂದಿ ಚೇತರಿಸಿಕೊಂಡಿದ್ದು, 1,783 ಮಂದಿ ಸಾವನ್ನಪ್ಪಿದ್ದಾರೆ
Next Story