ಬೆಳಗಾವಿ: ಕಾಲ್ನಡಿಗೆಯಲ್ಲೇ ಜಾರ್ಖಂಡ್ ಗೆ ಹೊರಟಿದ್ದ ಕಾರ್ಮಿಕ ಹಸಿವಿನಿಂದ ಮೃತ್ಯು; ಆರೋಪ

ಸಾಂದರ್ಭಿಕ ಚಿತ್ರ
ಬೆಳಗಾವಿ, ಮೇ 8: ಹಸಿವು ತಾಳಲಾರದೆ ಕಾರ್ಮಿಕನೋರ್ವ ಸಾವನ್ನಪ್ಪಿದ್ದಾರೆನ್ನಲಾದ ಘಟನೆ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಬಾಬುಲಾಲ್ ಸಿಂಗ್(45) ಮೃತ ಕಾರ್ಮಿಕನಾಗಿದ್ದು, ಹೊರರಾಜ್ಯದಿಂದ ಬಂದು ಹಲವು ದಿನಗಳಿಂದ ಚಿಕ್ಕೋಡಿಯಲ್ಲಿ ನೆಲೆಸಿದ್ದರು ಎಂದು ತಿಳಿದುಬಂದಿದೆ
ಲಾಕ್ಡೌನ್ ಹಿನ್ನೆಲೆಯಲ್ಲಿ ಕಾಲ್ನಡಿಗೆಯಲ್ಲೇ ಖಾನಾಪುರದಿಂದ ಜಾರ್ಖಂಡ್ ಗೆ ಹೊರಟಿದ್ದ 13 ಕಾರ್ಮಿಕರು, ಚಿಕ್ಕೋಡಿ ಬಳಿ ಆಗಮಿಸಿದಾಗ ಅವರನ್ನು ತಪಾಸಣೆಗಾಗಿ ಪೊಲೀಸರು ಆಸ್ಪತ್ರೆಗೆ ಕರೆ ತಂದಿದ್ದು, ಈ ವೇಳೆ ಬಾಬುಲಾಲ್ ಸಿಂಗ್ ಮೃತಪಟ್ಟಿದ್ದಾರೆ. ಸರಿಯಾಗಿ ಊಟ ಸಿಗದೆ ಅಸ್ವಸ್ಥರಾಗಿ ಬಾಬುಲಾಲ್ ಸಾವನ್ನಪ್ಪಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರುವ ಚಿಕ್ಕೋಡಿ ಠಾಣಾ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
Next Story





